ಲಾಹೋರ್: ಭಾರತದ ವಿರುದ್ಧ ನಾವೇ ಮೊದಲು ಪರಮಾಣು ಶಸ್ತ್ರಾಸ್ತ್ರಗಳನ್ನ ಬಳಸುವುದಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಭಾರತದ ವಿರುದ್ಧ ನಾವೇ ಮೊದಲಿಗೆ ಪರಮಾಣು ಶಸ್ತ್ರಾಸ್ತ್ರ ಬಳಸಲ್ಲ.. ಇಮ್ರಾನ್ ಖಾನ್ - ಇಮ್ರಾನ್ ಖಾನ್
ಭಾರತ ಮತ್ತು ಪಾಕ್ ಎರಡೂ ದೇಶಗಳು ಪರಮಾಣು ಶಸ್ತ್ರಾಸ್ತ್ರಗಳನ್ನ ಹೊಂದಿವೆ. ಕಾಶ್ಮೀರದ ಸಮಸ್ಯೆ ಹೆಚ್ಚಾದರೆ, ಇಡೀ ಪ್ರಪಂಚಕ್ಕೆ ತೊಂದರೆ ತಪ್ಪಿದ್ದಲ್ಲ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಇಮ್ರಾನ್ ಖಾನ್
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನ ಕೇಂದ್ರ ಸರ್ಕಾರ ರದ್ಧುಗೊಳಿಸಿದ ನಂತರ್ ಪಾಕ್ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಸಂಬಂಧ ಹದಗೆಟ್ಟಿದೆ. ಈ ಬಗ್ಗೆ ಲಾಹೋರ್ ಬಳಿ ಸಿಖ್ ಸಮುದಾಯದ ಜನರನ್ನ ಉದ್ದೇಶಿಸಿ ಮಾತನಾಡಿರುವ ಇಮ್ರಾನ್ ಖಾನ್, ಭಾರತ ಮತ್ತು ಪಾಕ್ ಎರಡೂ ದೇಶಗಳು ಪರಮಾಣು ಶಸ್ತ್ರಾಸ್ತ್ರಗಳನ್ನ ಹೊಂದಿವೆ. ಕಾಶ್ಮೀರದ ಸಮಸ್ಯೆ ಹೆಚ್ಚಾದರೆ ಇಡೀ ಪ್ರಪಂಚಕ್ಕೆ ತೊಂದರೆ ತಪ್ಪಿದ್ದಲ್ಲ. ಭಾರತದ ವಿರುದ್ಧ ನಾನೇ ಮೊದಲಿಗೆ ಪರಮಾಣು ಶಸ್ತ್ರಾಸ್ತ್ರಗಳನ್ನ ಬಳಸುವುದಿಲ್ಲ ಎಂದಿದ್ದಾರೆ.