ಕರ್ನಾಟಕ

karnataka

ETV Bharat / international

ಮಾರ್ಚ್ 15ರಿಂದ ಎರಡು ವಾರಗಳವರೆಗೆ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಿರುವ ಪಾಕಿಸ್ತಾನ - ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಿರುವ ಪಾಕ್

ಫೈಸಲಾಬಾದ್, ಗುಜ್ರಾನ್ವಾಲಾ, ಲಾಹೋರ್, ಗುಜರಾತ್, ಮುಲ್ತಾನ್, ರಾವಲ್ಪಿಂಡಿ ಮತ್ತು ಸಿಯಾಲ್ಕೋಟ್, ಇಸ್ಲಾಮಾಬಾದ್, ಪೇಶಾವರ ಮತ್ತು ಮುಜಫರಾಬಾದ್ ಸೇರಿದಂತೆ ಪಂಜಾಬ್ ಪ್ರಾಂತ್ಯದ ನಗರಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗುವುದು ಎಂದು ಪಾಕ್ ಶಿಕ್ಷಣ ಸಚಿವರು ತಿಳಿಸಿದ್ದಾರೆ.

corona

By

Published : Mar 10, 2021, 3:25 PM IST

ಇಸ್ಲಾಮಾಬಾದ್ (ಪಾಕಿಸ್ತಾನ): ಕೊರೊನಾ ವೈರಸ್​ನಿಂದಾಗಿ ಹೆಚ್ಚು ಹಾನಿಗೊಳಗಾದ ನಗರಗಳಲ್ಲಿನ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮಾರ್ಚ್ 15ರಿಂದ ಎರಡು ವಾರಗಳವರೆಗೆ ಮುಚ್ಚಲಾಗುವುದು ಎಂದು ಪಾಕಿಸ್ತಾನ ತಿಳಿಸಿದೆ.

ಶಿಕ್ಷಣ ಸಂಸ್ಥೆಗಳಲ್ಲಿ ಕೊರೊನಾ ವೈರಸ್​ನ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಶಿಕ್ಷಣ ಸಚಿವ ಶಫ್ಕತ್ ಮಹಮೂದ್ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಫೈಸಲಾಬಾದ್, ಗುಜ್ರಾನ್ವಾಲಾ, ಲಾಹೋರ್, ಗುಜರಾತ್, ಮುಲ್ತಾನ್, ರಾವಲ್ಪಿಂಡಿ ಮತ್ತು ಸಿಯಾಲ್ಕೋಟ್, ಇಸ್ಲಾಮಾಬಾದ್, ಪೇಶಾವರ ಮತ್ತು ಮುಜಫರಾಬಾದ್ ಸೇರಿದಂತೆ ಪಂಜಾಬ್ ಪ್ರಾಂತ್ಯದ ನಗರಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗುವುದು ಎಂದು ಮಹಮೂದ್ ಹೇಳಿದರು.

ಈ ನಗರಗಳು ಮತ್ತು ಜಿಲ್ಲೆಗಳಲ್ಲಿ ಮಾರ್ಚ್ 15ರಿಂದ ಮಾರ್ಚ್ 28ರವರೆಗೆ ಎಲ್ಲಾ ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಡುತ್ತವೆ. ಇತರೆಡೆ ಅರ್ಧದಷ್ಟು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುತ್ತಾರೆ ಎಂದು ಅವರು ಹೇಳಿದರು.

ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಹಾಜರಾಗುವ ಸುಮಾರು 50 ದಶಲಕ್ಷ ಮಕ್ಕಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ. ಸಿಂಧ್ ಮತ್ತು ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಪರಿಸ್ಥಿತಿ ಸುಧಾರಿಸಿದ್ದು, ಶೇಕಡಾ 50ರಷ್ಟು ವಿದ್ಯಾರ್ಥಿಗಳು ತರಗತಿಗೆ ಹಾಜರಾಗಬಹುದು ಎಂದು ಅವರು ವಿವರಿಸಿದರು.

ಪಾಕಿಸ್ತಾನದಲ್ಲಿ ಮಾರ್ಚ್ 1 ರಿಂದ ತರಗತಿಗಳನ್ನು ಪುನರಾರಂಭವಾದ ಬಳಿಕ ಕೊರೊನಾ ಪ್ರಕರಣಗಳು ಏರಿಕೆ ಕಾಣುತ್ತಿವೆ. ಪಾಕಿಸ್ತಾನದಲ್ಲಿ ಇದುವರೆಗೆ 13,324 ಸಾವುಗಳು ಸೇರಿದಂತೆ 5,95,239 ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ.

ABOUT THE AUTHOR

...view details