ಕರ್ನಾಟಕ

karnataka

ETV Bharat / international

ಕರ್ತಾರ್​ಪುರ ಯೋಜನೆ ನ.9ಕ್ಕೆ ಲೋಕಾರ್ಪಣೆ..ಇಮ್ರಾನ್​ ಖಾನ್ ಘೋಷಣೆ!

ನವೆಂಬರ್ 12 ರಂದು ಗುರು ನಾನಾಕ್ ಅವರ 550ನೇ ಜನ್ಮದಿನದ ಇರುವುದರಿಂದ ನವೆಂಬರ್ 9ರಂದು ಕರ್ತಾರ್​ಪುರ ಕಾರಿಡಾರ್ ಯೋಜನೆಯನ್ನ ಲೋಕಾರ್ಪಣೆಗೊಳಿಸಲಾಗುವುದು ಎಂದು ಪಾಕ್‌ ಪ್ರಧಾನಿ ಇಮ್ರಾನ್​ ಖಾನ್ ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿರುವ ಕರ್ತಾರ್​ಪುರ

By

Published : Oct 20, 2019, 10:10 PM IST

ಲಾಹೋರ್:ಬಹು ನಿರೀಕ್ಷಿತ ಕರ್ತಾರ್​ಪುರ ಕಾರಿಡಾರ್ ಯೋಜನೆಯನ್ನ ನವೆಂಬರ್​ 9ಕ್ಕೆ ಲೋಕಾರ್ಪಣೆಗೊಳಿಸಲಾಗುತ್ತದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಘೋಷಣೆ ಮಾಡಿದ್ದಾರೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಕರ್ತಾರ್​ಪುರ್​ನಲ್ಲಿರುವ ಸಿಖ್ಖರ ಪವಿತ್ರ ಕ್ಷೇತ್ರ ದರ್ಬಾರ್ ಸಾಹಿಬ್ ಗುರುದ್ವಾರ ಭೇಟಿಗೆ ಭಾರತೀಯರಿಗೆ ಅನುವು ಮಾಡಿಕೊಡಬೇಕು ಎಂಬ ಉದ್ದೇಶದಿಂದ ಉಭಯ ದೇಶಗಳು ಈ ಯೋಜನೆಯನ್ನ ಕೈಗೆತ್ತಿಕೊಂಡಿದ್ದವು.

ಪಾಕಿಸ್ತಾನ, ಭಾರತದ ಗಡಿಯಿಂದ ಕರ್ತಾರ್‌ಪುರದ ಗುರುದ್ವಾರ ದರ್ಬಾರ್ ಸಾಹಿಬ್‌ವರೆಗೆ ರಸ್ತೆ ನಿರ್ಮಿಸಿದ್ರೆ, ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಡೇರಾ ಬಾಬಾ ನಾನಕ್ ಪ್ರದೇಶದಿಂದ ಗಡಿಯವರೆಗೆ ಭಾರತ ರಸ್ತೆ ನಿರ್ಮಾಣ ಮಾಡಿದೆ.

ಪಾಕಿಸ್ತಾನದಲ್ಲಿರುವ ಕರ್ತಾರ್​ಪುರ..

ಕರ್ತಾರ್​ಪುರ ಕಾಮಗಾರಿ ಪೂರ್ಣಗೊಂಡಿದೆ. ನವೆಂಬರ್ 12ರಂದು ಗುರು ನಾನಾಕ್ ಅವರ 550ನೇ ಜನ್ಮದಿನ ಇರುವುದರಿಂದ ನವೆಂಬರ್ 9ರಂದು ಲೋಕಾರ್ಪಣೆಗೊಳಿಸಲಾಗುವುದು ಎಂದು ಇಮ್ರಾನ್​ ಖಾನ್ ತಿಳಿಸಿದ್ದಾರೆ.

ಏನು ಕರ್ತಾರ್​ಪುರ್ ಯೋಜನೆ?
ಸಿಖ್‌​ ಧರ್ಮ ಸಂಸ್ಥಾಪಕರಾದ ಬಾಬಾ ಗುರುನಾನಕ್ ಅವರು ತಮ್ಮ ಜೀವನದ ಕೊನೆಯ 18 ವರ್ಷವನ್ನ ಈಗಿನ ಪಾಕಿಸ್ತಾನದಲ್ಲಿರುವ ಕರ್ತಾರ್​ಪುರದಲ್ಲಿ ಕಳೆದಿದ್ದರು. ಹೀಗಾಗಿ ಕರ್ತಾರ್​ಪುರ್ ಸಿಖ್​ ಧರ್ಮದವರಿಗೆ ಪವಿತ್ರ ಸ್ಥಳ. ಭಾರತ ಮತ್ತು ಪಾಕಿಸ್ತಾನ ಗಡಿಯಿಂದ 4 ಕಿ.ಮೀ ದೂರದಲ್ಲಿರುವ ಈ ಸ್ಥಳಕ್ಕೆ ಭಾರತದಲ್ಲಿನ ಸಿಖ್‌ ಧರ್ಮೀಯರು ವೀಸಾ ರಹಿತವಾಗಿ ಪವಿತ್ರ ಯಾತ್ರೆಗೆ ತೆರಳುವ ಅವಕಾಶ ನೀಡುವ ಸಲುವಾಗಿ ಭಾರತ ಮತ್ತು ಪಾಕಿಸ್ತಾನ ರಾವಿ ನದಿಗೆ ಸೇತುವೆಯನ್ನ ನಿರ್ಮಾಣ ಮಾಡುವ ಯೋಜನೆ ರೂಪಿಸಿದ್ದವು.

ABOUT THE AUTHOR

...view details