ಕರ್ನಾಟಕ

karnataka

ETV Bharat / international

ಇಂದು ಪಾಕ್​​ನಿಂದ ಭಾರತದ 20 ಮೀನುಗಾರರ ಹಸ್ತಾಂತರ - ಗುಂಟೂರು ಶಾಸಕ ಮೋಪಿದೇವಿ ವೆಂಕಟರಮ

ಪಾಕಿಸ್ತಾನದಲ್ಲಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಪಾಕ್​ ಸಾಗರ ಭದ್ರತಾ ಸಂಸ್ಥೆಯು ಆಂಧ್ರ ಪ್ರದೇಶ ಮೂಲದ 20 ಮೀನುಗಾರರನ್ನು ಬಂಧಿಸಿ ಲಾಹೋರ್​ನ ಮರ್ಲಿರ್​ ಜಿಲ್ಲಾ ಕಾರಾಗೃಹದಲ್ಲಿ ಬಂಧನದಲ್ಲಿ ಇರಿಸಲಾಗಿದೆ. ಈ ಮೀನುಗಾರರನ್ನು ಇಂದು ಪಾಕ್​ ಸರ್ಕಾರ ಭಾರತಕ್ಕೆ ಹಸ್ತಾಂತರಿಸಲಿದೆ.

pakistan to hand over 20 indian fishermen today
ಮೀನುಗಾರರನ್ನು ಇಂದು ಹಸ್ತಾಂತರಿಸಲಿರುವ ಪಾಕ್

By

Published : Jan 6, 2020, 12:21 PM IST

ಇಸ್ಲಮಾಬಾದ್​:ಕಳೆದ ವರ್ಷ ನವೆಂಬರ್​ನಲ್ಲಿ ಪಾಕ್​ ಸಾಗರ ಭದ್ರತಾ ಸಂಸ್ಥೆ ಬಂಧಿಸಿದ್ದ 20 ಭಾರತೀಯ ಮೀನುಗಾರರನ್ನು ಇಂದು ಪಾಕ್​ ಸರ್ಕಾರ ಭಾರತಕ್ಕೆ ಹಸ್ತಾಂತರಿಸಲಿದೆ.

ಪಾಕಿಸ್ತಾನಕ್ಕೆ ಒಳಪಡುವ ಸಮುದ್ರದ ಸರಹದ್ದಿನಲ್ಲಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಪಾಕಿಸ್ತಾನ ಸಾಗರ ಭದ್ರತಾ ಸಂಸ್ಥೆಯು ಆಂಧ್ರ ಪ್ರದೇಶ ಮೂಲದ 20 ಮೀನುಗಾರರನ್ನು ಬಂಧಿಸಿ ಲಾಹೋರ್​ನ ಮರ್ಲಿರ್​ ಜಿಲ್ಲಾ ಕಾರಾಗೃಹದಲ್ಲಿ ಬಂಧನದಲ್ಲಿ ಇರಿಸಿತ್ತು.

ಗುಂಟೂರು ಶಾಸಕ ಮೋಪಿದೇವಿ ವೆಂಕಟರಮಣ

ನಿನ್ನೆ ಸಂಜೆ 3 ಗಂಟೆಗೆ ಈ ಮೀನುಗಾರರನ್ನು ಬಿಡುಗಡೆಗೊಳಿಸಲಾಗಿದ್ದು, ಇಂದು ವಾಘಾ ಗಡಿಯಲ್ಲಿ ಸಂಜೆ 5 ಗಂಟೆಗೆ ಈ ಮೀನುಗಾರರನ್ನು ಪಾಕ್​ ಭಾರತಕ್ಕೆ ಹಸ್ತಾಂತರಿಸಲಿದೆ.

ಆಂಧ್ರ ಪ್ರದೇಶದ ಗುಂಟೂರು ಶಾಸಕ ಮೋಪಿದೇವಿ ವೆಂಕಟರಮಣ ಈ ಮೀನುಗಾರರನ್ನು ಕರೆತರಲು ತೆರಳುತ್ತಿದ್ದಾರೆ.

ABOUT THE AUTHOR

...view details