ಕರ್ನಾಟಕ

karnataka

ETV Bharat / international

ಉಗ್ರರ ತಾಣ ಪಾಕ್​ ಬೂದು ಪಟ್ಟಿಯಲ್ಲಿಯೇ ಉಳಿಯಲಿದೆ : ಎಫ್​ಎಟಿಎಫ್​​

ಎಫ್ಎಟಿಎಫ್​ ಪ್ರಕಾರ ಬೂದು ಪಟ್ಟಿ ರಾಷ್ಟ್ರಗಳು ಭಯೋತ್ಪಾದನೆಗೆ ಹಣಕಾಸು ಪೂರೈಸುವ ರಾಷ್ಟ್ರಗಳಾಗಿರುತ್ತವೆ. ಈ ರಾಷ್ಟ್ರಗಳನ್ನು ಭಯೋತ್ಪಾದಕರ ಸ್ವರ್ಗ ಎಂದೇ ಕರೆಯಲಾಗುತ್ತದೆ. ಇಂತಹ ರಾಷ್ಟ್ರಗಳನ್ನು ಎಫ್​ಎಟಿಎಫ್​ ಬೂದು ಪಟ್ಟಿಗೆ ಸೇರಿಸುತ್ತದೆ..

Pakistan stays in FATF 'grey list'
ಉಗ್ರರ ತಾಣ ಪಾಕ್​ ಬೂದು ಪಟ್ಟಿಯಲ್ಲಿಯೇ ಉಳಿಯಲಿದೆ: ಎಫ್​ಎಟಿಎಫ್​​

By

Published : Feb 26, 2021, 7:05 AM IST

ನವದೆಹಲಿ :ಜಾಗತಿಕ ಭಯೋತ್ಪಾದನಾ ವಿರೋಧಿ ಹಣಕಾಸು ಕಾವಲುಪಡೆ (ಎಫ್​ಎಟಿಎಫ್​​) ಗುರುವಾರ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ ಪಾಕಿಸ್ತಾನ ಜಾಗತಿಕ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ. ಹಾಗಾಗಿ ಅದು ಬೂದು ಪಟ್ಟಿಯಲ್ಲಿಯೇ ಮುಂದುವರೆಯುತ್ತಿದೆ.

ಜಾಗತಿಕ ಭಯೋತ್ಪಾದನಾ ವಿರೋಧಿ ಹಣಕಾಸು ಕಾವಲುಪಡೆ ನೀಡಿದ್ದ 3 ಅಂಶಗಳನ್ನು ಪಾಕಿಸ್ತಾನ ಪೂರೈಸಲಾಗದ ಹಿನ್ನೆಲೆ ಮೊದಲಿದ್ದಂತೆ ಅದನ್ನು ಬೂದು ಪಟ್ಟಿಯಲ್ಲಿಯೇ ಮುಂದುವರೆಯಬೇಕು ಎಂದು ಎಫ್​ಎಟಿಎಫ್​ ಹೇಳಿದೆ.

ಭಯೋತ್ಪಾದನೆಗೆ ಹಣಕಾಸು ಪೂರೈಕೆ ಹಾಗೂ ಅಕ್ರಮ ಹಣ ವರ್ಗಾವಣೆಯನ್ನು ವಿಚಾರದಲ್ಲಿ 27 ಅಂಶಗಳ ಮೂಲಕ ಪಾಕಿಸ್ತಾನವನ್ನು ಪರಿಶೀಲನೆ ಮಾಡಲಾಗಿದೆ. ಮೂರು ಅಂಶಗಳಲ್ಲಿ ಪಾಕಿಸ್ತಾನ ಭಯೋತ್ಪಾದನೆಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವುದು ಗೊತ್ತಾಗಿತ್ತು.

ಇದನ್ನೂ ಓದಿ:ವಿವಾಹಿತ ಮಹಿಳೆ ಅಪಹರಿಸಿ, ಅತ್ಯಾಚಾರವೆಸಗಿದ ದುಷ್ಕರ್ಮಿಗಳು!

ಅವುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಣಕಾಸು ಕಾವಲುಪಡೆ ಸೂಚನೆ ನೀಡಿದ್ದರೂ, ಪಾಕಿಸ್ತಾನ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದಾಗಿ ಪಾಕಿಸ್ತಾವನ್ನು ಬೂದು ಪಟ್ಟಿಯಲ್ಲಿಯೇ ಮುಂದುವರೆಸಲಾಗಿದೆ. ಈಗ ಮತ್ತೊಮ್ಮೆ ಜೂನ್ 21ರವರೆಗೆ ಕ್ರಮ ಕೈಗೊಳ್ಳಲು ಅವಕಾಶ ನೀಡಿದೆ.

ಎಫ್​ಎಟಿಎಫ್​​ ಬೂದು ಪಟ್ಟಿ ಎಂದರೇನು? :ಎಫ್ಎಟಿಎಫ್​ ಪ್ರಕಾರ ಬೂದು ಪಟ್ಟಿ ರಾಷ್ಟ್ರಗಳು ಭಯೋತ್ಪಾದನೆಗೆ ಹಣಕಾಸು ಪೂರೈಸುವ ರಾಷ್ಟ್ರಗಳಾಗಿರುತ್ತವೆ. ಈ ರಾಷ್ಟ್ರಗಳನ್ನು ಭಯೋತ್ಪಾದಕರ ಸ್ವರ್ಗ ಎಂದೇ ಕರೆಯಲಾಗುತ್ತದೆ. ಇಂತಹ ರಾಷ್ಟ್ರಗಳನ್ನು ಎಫ್​ಎಟಿಎಫ್​ ಬೂದು ಪಟ್ಟಿಗೆ ಸೇರಿಸುತ್ತದೆ.

ಈ ಬಾರಿ ಬೂದು ಪಟ್ಟಿಯಿಂದ ಹೊರಬರಲು ಪಾಕ್​ ಸಾಕಷ್ಟು ಕಸರತ್ತು ನಡೆಸಿತ್ತು. ಬೂದು ಪಟ್ಟಿಯ ನಂತರ ಬ್ಲಾಕ್​ ಲಿಸ್ಟ್ ಎಂಬ ಮತ್ತೊಂದು ಪಟ್ಟಿಯನ್ನು ಎಫ್​ಎಟಿಎಫ್​ ತಯಾರಿಸಲಿದೆ. ಬೂದು ಪಟ್ಟಿಯಲ್ಲಿರುವ ರಾಷ್ಟ್ರಗಳಲ್ಲಿ ಭಯೋತ್ಪಾದನೆ ಬೆಂಬಲ ನೀಡುವ ಅಂಶಗಳು ತೀವ್ರವಾಗಿ ಕಂಡು ಬಂದರೆ ಅಂತಹ ರಾಷ್ಟ್ರವನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ. ಇಂತಹ ರಾಷ್ಟ್ರಗಳಿಗೆ ಈ ಅಂತಾರಾಷ್ಟ್ರೀಯ ಸಂಘಟನೆಗಳಿಂದ ಹಣಕಾಸು ಬೆಂಬಲ ದೊರಯಲು ಕಷ್ಟವಾಗುತ್ತದೆ.

ABOUT THE AUTHOR

...view details