ಲಾಹೋರ್(ಪಾಕಿಸ್ತಾನ): ಭಾರಿ ಹಿಮ ಬಿರುಗಾಳಿಯಿಂದಾಗಿ ಪಾಕಿಸ್ತಾನದ ಗಿರಿಧಾಮವಾದ ಮುರ್ರೀಯಲ್ಲಿ ಕನಿಷ್ಠ 22 ಮಂದಿ ಸಾವನ್ನಪ್ಪಿದ್ದು, ಈ ಪ್ರದೇಶವನ್ನು ವಿಪತ್ತು ಪೀಡಿತ ಪ್ರದೇಶವನ್ನು ಪಾಕಿಸ್ತಾನ ಸರ್ಕಾರ ಘೋಷಣೆ ಮಾಡಿದೆ.
ಪಂಜಾಬ್ ಪ್ರಾಂತ್ಯದಲ್ಲಿರುವ ರಾವಲ್ಪಿಂಡಿ ಜಿಲ್ಲೆಯ ಮುರ್ರೀ ಗಿರಿಧಾಮದಲ್ಲಿ ಭಾರಿ ಹಿಮಪಾತದಿಂದಾಗಿ ವಾಹನಗಳು ಸಿಲುಕಿ, ಅದರಲ್ಲಿದ್ದ ಜನರು ಹೆಪ್ಪುಗಟ್ಟಿದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ 9 ಮಕ್ಕಳೂ ಸೇರಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುರ್ರೀ ಗಿರಿಧಾಮದಲ್ಲಿ ಇನ್ನೂ ನೂರಾರು ಮಂದಿ ಸಿಲುಕಿದ್ದು, ರಕ್ಷಣಾ ಕಾರ್ಯವನ್ನು ತ್ವರಿತಗೊಳಿಸಬೇಕೆಂದು ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಉಸ್ಮಾನ್ ಬುಜ್ದರ್ ಅವರು ರಕ್ಷಣಾ ಪಡೆಗಳಿಗೆ ಸೂಚನೆ ನೀಡಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಹವಾಮಾನ ಪರಿಸ್ಥಿತಿಗಳನ್ನು ಪರಿಶೀಲನೆ ನಡೆಸದೇ ಜಿಲ್ಲಾಡಳಿತ ಗಿರಿಧಾಮಕ್ಕೆ ಅವಕಾಶ ನೀಡಿದ್ದು, ಈ ಕುರಿತು ತನಿಖೆ ಆದೇಶಿಸಲಾಗಿದೆ ಎಂದು ಟ್ವಿಟರ್ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ:ನೋಡಿ: ಬ್ರೆಜಿಲ್‌ನಲ್ಲಿ ಸರೋವರದ ಬೆಟ್ಟ ಕುಸಿದು ಐವರು ಸಾವು, 20 ಮಂದಿ ನಾಪತ್ತೆ