ಇಸ್ಲಾಮಾಬಾದ್: ಭಾರತೀಯ ಸಿನಿಮಾಗಳ ಪ್ರದರ್ಶನ ಸಂಪೂರ್ಣವಾಗಿ ಬ್ಯಾನ್ ಮಾಡಿ ಪಾಕ್ ಸುಪ್ರೀಂ ಕೋರ್ಟ್ ಹೊಸ ಆದೇಶ ಹೊರಡಿಸಿದೆ.
ಪಾಕ್ ಖಾಸಗಿ ವಾಹಿನಿಗಳಲ್ಲಿ ಭಾರತೀಯ ಸಿನಿಮಾ ಪ್ರಸಾರ ಸಂಪೂರ್ಣ ಬ್ಯಾನ್! - ಸುಪ್ರೀಂ ಕೋರ್ಟ್
ಭಾರತೀಯ ವಾಹಿನಿಗಳು ಪಾಕಿಸ್ತಾನದಲ್ಲಿ ಪ್ರಸಾರವಾಗಬಾರದು ಎನ್ನುವ ಅರ್ಜಿ ವಿಚಾರಣೆ ನಡೆಸಿದ ಜಸ್ಟೀಸ್ ಗುಲ್ಜಾರ್ ಅಹಮದ್ ನೇತೃತ್ವದ ತ್ರಿಸದಸ್ಯ ಪೀಠ ಈ ಆದೇಶ ನೀಡಿದೆ.

ಪಾಕ್ ಸುಪ್ರೀಂ ಕೋರ್ಟ್
ಗಡಿಯಲ್ಲಿ ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದ್ದು, ಪಾಕ್ ಸರ್ವೋಚ್ಚ ನ್ಯಾಯಾಲಯ ಪಾಕಿಸ್ತಾನದ ಖಾಸಗಿ ವಾಹಿನಿಗಳಲ್ಲಿ ಭಾರತೀಯ ಸಿನಿಮಾ ಹಾಗೂ ಟಿವಿ ಶೋ ಪ್ರಸಾರವನ್ನು ನಿಷೇಧಿಸಿದೆ.
2006ರಲ್ಲಿ ಲಾಹೋರ್ ಹೈಕೋರ್ಟ್ ಶೇ. 10ರಷ್ಟು ವಿದೇಶಿ ವಿಚಾರಗಳನ್ನು ಪಾಕ್ ಖಾಸಗಿ ವಾಹಿನಿಗಳು ಪ್ರಸಾರ ಮಾಡಬಹುದು ಎಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸದ್ಯ ಅರ್ಜಿ ಸಲ್ಲಿಕೆಯಾಗಿತ್ತು.