ಕರ್ನಾಟಕ

karnataka

ETV Bharat / international

ಭಾರತದಿಂದ ತನ್ನ ನಾಗರಿಕರನ್ನೇ ವಾಪಸ್ ಕರೆಯಿಸಿಕೊಳ್ಳುತ್ತಿಲ್ಲ ಪಾಕ್ - ಪಾಕಿಸ್ತಾನ ಪ್ರಜೆಗಳ ಕೊರೊನಾ ಆತಂಕ

ಮುಂದಿನ ಸೂಚನೆ ಬರುವವರೆಗೂ ವಿದೇಶಗಳಲ್ಲಿರುವವರು ತಮ್ಮ ದೇಶಕ್ಕೆ ಮರಳಿ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ..

pakistan-refuses-to-take-back-its-own-citizens
ಇಮ್ರಾನ್ ಖಾನ್

By

Published : Apr 23, 2021, 5:24 PM IST

ಅಮೃತಸರ್ :ಕೊರೊನಾ 2ನೇ ಅಲೆಯಿಂದ ದೇಶದಲ್ಲಿ ಸಿಲುಕಿಕೊಂಡಿದ್ದ 154 ಪಾಕಿಸ್ತಾನಿ ಪ್ರಜೆಗಳ ವಾಪಸಾತಿಗೆ ಅಲ್ಲಿನ ಸರ್ಕಾರ ನಿರಾಕರಿಸಿದೆ.

ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಲಾಕ್​ಡೌನ್​ ಮಾಡಿದ ನಂತರ ಅನೇಕ ದೇಶದ ಜನರು ಇತರ ದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ. ಇವರನ್ನು ಸರ್ಕಾರಗಳ ಒಪ್ಪಿಗೆಯೊಂದಿಗೆ ಕಾಲಕಾಲಕ್ಕೆ ಅವರ ದೇಶಗಳಿಗೆ ಮರಳಿ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

ಇದೇ ರೀತಿ ಭಾರತದಲ್ಲಿ ಸಿಕ್ಕಿಕೊಂಡಿರುವ 154 ಪಾಕಿಸ್ತಾನಿ ಪ್ರಜೆಗಳು ಏಪ್ರಿಲ್ 23 ರಂದು ಅತ್ತಾರಿ-ವಾಗಾ ಗಡಿಯ ಮೂಲಕ ಮರಳಬೇಕಿತ್ತು.

ಆದರೆ, ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ಉಲ್ಲೇಖಿಸಿ ಪಾಕಿಸ್ತಾನ ಸರ್ಕಾರ ಈವರೆಗೆ ತನ್ನ ಪ್ರಜೆಗಳನ್ನು ಮರಳಿ ಕರೆಯಿಸಲು ನಿರಾಕರಿಸಿದೆ.

ಭಾರತದಲ್ಲಿ ಕೊರೊನಾ ಸಾಂಕ್ರಾಮಿಕ ರೋಗ ಹೆಚ್ಚಾಗಿದೆ ಎಂದು ಪಾಕಿಸ್ತಾನ ಸರ್ಕಾರ ಹೇಳುತ್ತಿದೆ. ಅದೇ ಕಾರಣಕ್ಕಾಗಿ ವಾಪಸ್‌ ಕರೆಯಿಸಿಕೊಳ್ಳುತ್ತಿಲ್ಲ.

ಮುಂದಿನ ಸೂಚನೆ ಬರುವವರೆಗೂ ವಿದೇಶಗಳಲ್ಲಿರುವವರು ತಮ್ಮ ದೇಶಕ್ಕೆ ಮರಳಿ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ.

ಓದಿ:ಕೊರೊನಾ ಆರ್ಭಟ: ಸಿಎಂಗಳೊಂದಿಗಿನ ಮೋದಿ ಸಭೆಗೆ ಗೈರಾದ ಮಮತಾ !

ABOUT THE AUTHOR

...view details