ಇಸ್ಲಾಮಾಬಾದ್ : ಇಂದು ಒಂದೇ ದಿನ 100 ಹೊಸ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪಾಕಿಸ್ತಾನದಲ್ಲಿ ಪತ್ತೆಯಾಗಿವೆ. ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 1600ಕ್ಕೇರಿದೆ. ಈವರೆಗೆ ಆ ದೇಶದಲ್ಲಿ ಕೋವಿಡ್ಗೆ 17 ಜನ ಬಲಿಯಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಪಾಕಿಸ್ತಾನದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 1600ಕ್ಕೇರಿಕೆ..
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕೋವಿಡ್ ಆರ್ಭಟ ಅಷ್ಟೊಂದಿಲ್ಲ. ಇಲ್ಲಿ ಕೇವಲ ಆರು ಜನರಿಗೆ ಮಾತ್ರ ಸೋಂಕು ತಗುಲಿದೆ. ಆದರೆ, ಈ ಪ್ರದೇಶದಲ್ಲಿ ಕ್ವಾರಂಟೈನ್ ಶಿಬಿರಗಳನ್ನು ಸ್ಥಾಪಿಸಲಾಗಿದೆ.
ಪಾಕ್‌ನ ದಕ್ಷಿಣ ಏಷ್ಯಾದಲ್ಲಿಯೇ ಅತಿ ಹೆಚ್ಚು ಕೋವಿಡ್ ಸೋಂಕಿತರನ್ನು ಹೊಂದಿದ ದೇಶ. ಪಂಜಾಬ್ ಪ್ರಾಂತ್ಯದಲ್ಲಿ 593, ಸಿಂಧ್ನಲ್ಲಿ 502, ಖೈಬರ್ ಪಖ್ತುನಖ್ವಾದಲ್ಲಿ 192, ಬಲೂಚಿಸ್ತಾನದಲ್ಲಿ 141, ಇಸ್ಲಾಮಾಬಾದ್ನಲ್ಲಿ 43 ಹಾಗೂ ಗಿಲ್ಗಿಟ್-ಬಾಲ್ಟಿಸ್ತಾನ್ನಲ್ಲಿ 123 ಜನರಿಗೆ ಕೊರೊನಾ ಸೋಂಕು ತಗುಲಿದೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕೋವಿಡ್ ಆರ್ಭಟ ಅಷ್ಟೊಂದಿಲ್ಲ. ಇಲ್ಲಿ ಕೇವಲ ಆರು ಜನರಿಗೆ ಮಾತ್ರ ಸೋಂಕು ತಗುಲಿದೆ. ಆದರೆ, ಈ ಪ್ರದೇಶದಲ್ಲಿ ಕ್ವಾರಂಟೈನ್ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಪಾಕಿಸ್ತಾನದ ಎಲ್ಲೆಡೆಯಿಂದ ಸೋಂಕಿತರನ್ನು ತಂದು ಇಲ್ಲಿರಿಸಲಾಗುತ್ತಿದೆ ಎಂದು ಪಾಕ್ ಆಕ್ರಮಿತ ಕಾಶ್ಮೀರ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.