ಇಸ್ಲಾಮಾಬಾದ್( ಪಾಕಿಸ್ತಾನ): ನೆರೆಯ ನಮ್ಮ ವೈರಿ ರಾಷ್ಟ್ರ ಪಾಕಿಸ್ತಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ತೀವ್ರ ಕಳಪೆ ಮಟ್ಟದಲ್ಲಿದೆ ಎಂದು ಮೀಡಿಯಾ ಮ್ಯಾಟರ್ಸ್ ಫಾರ್ ಡೆಮಾಕ್ರಸಿ ತನ್ನ ಮೌಲ್ಯಮಾಪನ ವರದಿಯಲ್ಲಿ ಹೇಳಿದೆ.
ಪಾಕಿಸ್ತಾನ ಸ್ವಾತಂತ್ರ್ಯ ಅಭಿವ್ಯಕ್ತಿ ವರದಿ 2020 ಅನ್ನು ವೆಬ್ನಾರ್ ಮೂಲಕ ಮೀಡಿಯಾ ಮ್ಯಾಟರ್ಸ್ ಫಾರ್ ಡೆಮಾಕ್ರಸಿ ಬುಧವಾರ ತನ್ನ ವರದಿಯನ್ನು ಬಿಡುಗಡೆ ಮಾಡಿದೆ ಎಂದು ದಿ ನ್ಯೂಸ್ ಇಂಟರ್ನ್ಯಾಷನಲ್ ತಿಳಿಸಿದೆ.
ವರದಿ ಬಿಡುಗಡೆ ಮಾಡಿ ಮಾತನಾಡಿದ ಪಾಕಿಸ್ತಾನದಲ್ಲಿನ ಯುರೋಪಿಯನ್ ಯೂನಿಯನ್ (ಇಯು) ರಾಯಭಾರಿ ಆಂಡ್ರೌಲ್ಲಾ ಕಾಮಿನಾರಾ, ಈ ವರದಿ ಪಾಕಿಸ್ತಾನದ ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ಥಿತಿಯ ಸಮಗ್ರ ವಿಶ್ಲೇಷಣೆಯನ್ನ ವಿಶ್ವದ ಮುಂದಿಟ್ಟಿದೆ ಎಂದರು.
ಓದಿ: ಭಾರತ ಪಾಕ್ ಸಂಬಂಧ: ಇಮ್ರಾನ್ ಖಾನ್ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ಇಸ್ಲಾಮಾಬಾದ್
ಈ ವರದಿಯಲ್ಲಿ ಉಲ್ಲೇಖಿಸಿದಂತೆ ಪತ್ರಕರ್ತರ ಪರಿಸ್ಥಿತಿ ಇಲ್ಲಿ ಹೀನಾಯವಾಗಿದೆ. ಪತ್ರಕರ್ತರ ಮೇಲೆ ನಿರಂತರ ದಾಳಿ, ಬೆದರಿಕೆ ಮತ್ತು ಕಿರುಕುಳ ನೀಡಲಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.