ಇಸ್ಲಾಮಾಬಾದ್(ಪಾಕಿಸ್ತಾನ): ಭಾರತದ ಬಲಿಷ್ಠ ರಫೇಲ್ ಯುದ್ಧ ವಿಮಾನ ಎದುರಿಸಲು ಪಾಕ್ ಇದೀಗ ಚೀನಾ ತಯಾರಿಸಿರುವ J-10C ಫೈಟರ್ ಜೆಟ್ ಖರೀದಿ ಮಾಡಿದ್ದು, ಇಂದು ಅಧಿಕೃತವಾಗಿ ತನ್ನ ವಾಯುಪಡೆಗೆ ಸೇರ್ಪಡೆ ಮಾಡಿಕೊಂಡಿದೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ಪಾಕಿಸ್ತಾನದ ಆಂತರಿಕ ಸಚಿವ ಶೇಖ್ ರಶೀದ್ ಅಹ್ಮದ್ ಅವರು ಚೀನಾದ 25 J-10C ಫೈಟರ್ ಜೆಟ್ ಖರೀದಿಗೆ ಸಹಿ ಹಾಕಿದ್ದರು. ಇದೀಗ ಎಲ್ಲ ಪೈಟರ್ ಜೆಟ್ಗಳು ಪಾಕಿಸ್ತಾನದ ವಾಯುಪಡೆ ಸೇರಿಕೊಂಡಿದ್ದು, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಖುದ್ದಾಗಿ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಫೈಟರ್ ಜೆಟ್ಗಳನ್ನ ವಾಯುಸೇನೆಗೆ ವಿಲೀನಗೊಳಿಸಿದ ನಂತರ ಮಾತನಾಡಿದ ಇಮ್ರಾನ್ ಖಾನ್, ಈ ಪ್ರದೇಶದಲ್ಲಿ ಭೀತಿ ಹುಟ್ಟಿಸುವ ಕೆಲಸ ಮಾಡಲಾಗ್ತಿದ್ದು, ಅದಕ್ಕೆ ತಕ್ಕ ಉತ್ತರ ನೀಡಲು ಇದೀಗ ಈ ಫೈಟರ್ ಜೆಟ್ ಖರೀದಿ ಮಾಡಲಾಗಿದೆ. ಇದು ನಮ್ಮ ರಕ್ಷಣಾ ವ್ಯವಸ್ಥೆಗೆ ದೊಡ್ಡ ಬಲ ಎಂದಿದ್ದಾರೆ.