ಕರ್ನಾಟಕ

karnataka

ETV Bharat / international

ಚೀನಾ ಸಹಕಾರದೊಂದಿಗೆ 'ಪಾಕ್​ವ್ಯಾಕ್​' ಕೋವಿಡ್ ಲಸಿಕೆ ಅಭಿವೃದ್ಧಿಪಡಿಸಿದ ಪಾಕಿಸ್ತಾನ - ಪಾಕ್ ಲಸಿಕೆ

ಭಾರತ ಸೇರಿದಂತೆ ಜಗತ್ತಿನ ಕೆಲವೇ ಕೆಲವು ರಾಷ್ಟ್ರಗಳು ಮಾತ್ರ ಕೋವಿಡ್ ಲಸಿಕೆ ಅಭಿವೃದ್ಧಿಪಡಿಸಿದೆ. ಈ ನಡುವೆ ಪಾಕಿಸ್ತಾನ ತನ್ನದೇ ಆದ ಕೋವಿಡ್ ಲಸಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಇದಕ್ಕೆ ಜಾಗತಿಕ ಮನ್ನಣೆ ಸಿಗಲಿದೆಯಾ ಎಂಬುವುದನ್ನು ಕಾದು ನೋಡಬೇಕಾಗಿದೆ.

Pakistan COVID-19 vaccine
ಪಾಕ್​ವ್ಯಾಕ್ ಲಸಿಕೆ

By

Published : Jun 2, 2021, 12:17 PM IST

ಇಸ್ಲಾಮಾಬಾದ್ (ಪಾಕಿಸ್ತಾನ): ಚೀನಾದ ಸಹಾಯದೊಂದಿಗೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೋವಿಡ್ ಲಸಿಕೆ ಪಾಕ್​ವ್ಯಾಕ್​​​​ಅನ್ನು ಪಾಕಿಸ್ತಾನ ಬಿಡುಗಡೆ ಮಾಡಿದೆ.

ಈ ಕುರಿತು ಮಾತನಾಡಿರುವ ವಿಶೇಷ ಆರೋಗ್ಯ ಸಹಾಯಕ ಡಾ. ಫೈಝಲ್ ಸುಲ್ತಾನ್, ಪಾಕಿಸ್ತಾನ ಮಿತ್ರರ ಸಹಾಯದೊಂದಿಗೆ ಸಂದಿಗ್ಧ ಪರಿಸ್ಥಿತಿಯಿಂದ ಹೊರ ಬರಲು ಪ್ರಯತ್ನಿಸುತ್ತಿದೆ ಮತ್ತು ಸಂಕಷ್ಟವನ್ನು ಅವಕಾಶವನ್ನಾಗಿ ಪರಿವರ್ತಿಸುತ್ತಿದೆ ಎಂದಿದ್ದಾರೆ.

ಕೋವಡ್ ವಿರುದ್ಧ ಹೋರಾಡಲು ನಮ್ಮ ಮಿತ್ರ ರಾಷ್ಟ್ರ ಚೀನಾ ನಮಗೆ ಬಹಳ ಹತ್ತಿರದ ಸಹಾಯ ನೀಡುತ್ತಿದೆ. ಚೀನಾ ನಮಗೆ ಕಚ್ಚಾ ವಸ್ತುಗಳನ್ನು ನೀಡಿದೆ. ಆದರೂ ಲಸಿಕೆ ತಯಾರಿಸುವುದು ಅಷ್ಟು ಸುಲಭವಲ್ಲ. ಬೃಹತ್ ಸಂಖ್ಯೆಯಲ್ಲಿ ಲಸಿಕೆ ತಯಾರಿಸುವ ಕೆಲಸ ಶೀಘ್ರದಲ್ಲಿ ಪ್ರಾರಂಭವಾಗಲಿದೆ ಎಂದು ಡಾ. ಸುಲ್ತಾನ್ ಹೇಳಿದ್ದಾರೆ. ಇಂದಿನ ದಿನ ಪಾಕಿಸ್ತಾನಕ್ಕೆ ಅಂತ್ಯದ ಪ್ರಮುಖ ದಿನವಾಗಿದೆ ಎಂದು ನ್ಯಾಷನಲ್ ಕಮಾಂಡ್ ಆ್ಯಂಡ್ ಆಪರೇಷನ್ಸ್ ಸೆಂಟರ್ ( ಎನ್​ಸಿಒಸಿ)ನ ಮುಖ್ಯಸ್ಥ ಅಸಾದ್ ಉಮರ್ ಸಂತಸ ವ್ಯಕ್ತಪಡಿಸಿದ್ದಾರೆ.

ಪಾಕ್​ನಲ್ಲಿ ಜೂನ್​ 1ರಂದು 1,771 ಹೊಸ ಕೋವಿಡ್ ಪಾಟಿಸಿವ್ ಪ್ರಕರಣಗಳು ದಾಖಲಾಗುವ ಮೂಲಕ ಮೂರು ತಿಂಗಳಲ್ಲಿ ಮೊದಲ ಬಾರಿಗೆ ಪಾಸಿಟಿವಿಟಿ ಪ್ರಮಾಣ ಶೇ. 4ಕ್ಕಿಂತ ಕೆಳಗೆ ಬಂದಿದೆ. ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಇದುವರೆಗೆ ದೇಶದಲ್ಲಿ 9,22,824 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇದುವರೆಗೆ ಒಟ್ಟು 5.3 ಮಿಲಿಯನ್ ಜನರಿಗೆ 7.3 ಮಿಲಿಯನ್ ಡೋಸ್ ಲಸಿಕೆ ನೀಡಲಾಗಿದ್ದು, 2 ಮಿಲಿಯನ್ ಜನರಿಗೆ ಎರಡೂ ಡೋಸ್ ಲಸಿಕೆ ವಿತರಿಸಲಾಗಿದೆ.

ಓದಿ :16 ಚೀನಾದ ಜೆಟ್‌ಗಳು ಸಾರ್ವಭೌಮತ್ವಕ್ಕೆ ಧಕ್ಕೆ ತಂದಿವೆ: ಮಲೇಷ್ಯಾ

ABOUT THE AUTHOR

...view details