ನಂಕಾನಾ ಸಾಹೀಬ್(ಪಾಕ್): ಪಾಕಿಸ್ತಾನದ ನಂಕಾಬಾ ಸಾಹೀಬ್ನಲ್ಲಿ 2019ರಲ್ಲಿ ಸಿಖ್ಖ್ ಬಾಲಕಿಯನ್ನು ಬಲವಂತವಾಗಿ ಅಪಹರಣ ಮಾಡಿ, ಮತಾಂತರಗೊಳಿಸಿ ಮದುವೆಯಾದ ಪ್ರಕರಣದಲ್ಲಿ ಇದೀಗ ಪಾಕ್ ಕೋರ್ಟ್ನಿಂದ ಶಿಕ್ಷೆ ಪ್ರಕಟಗೊಂಡಿದೆ.
ಎಂಟು ಆರೋಪಿಗಳ ಪೈಕಿ ಮೂವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಲಾಗಿದೆ. ಮುಹಮ್ಮದ್ ಸಲ್ಮಾನ್ ಮತ್ತು ಮಹಮ್ಮದ್ ಅಹ್ಮದ್ ಎಂಬುವರಿಗೆ ಆರು ತಿಂಗಳ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಲಾಗಿದೆ.
ಸಿಖ್ಖ್ ಸಮುದಾಯ ಗುರಿಯಾಗಿಸಿ ಹಿಂಸಾಚಾರ ಪ್ರಚೋದಿಸಿದ ಆರೋಪ ಇದಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಆದರೆ ಪ್ರಕರಣದಲ್ಲಿ ಇತರೆ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಸಿಖ್ಖ್ನಿಂದ ಇಸ್ಲಾಂಗೆ ಮತಾಂತರಗೊಳಿಸಿ ಆಕೆಯನ್ನು ಮದುವೆ ಮಾಡಿಕೊಳ್ಳಲಾಗಿತ್ತು. ಜತೆಗೆ ಆಕೆಯ ಹೆಸರು ಜಗ್ಜಿತ್ ಕೌರ್ನಿಂದ ಆಯೆಷಾ ಎಂದು ಬದಲಾಯಿಸಲಾಗಿತ್ತು.
ಇದೇ ವಿಚಾರವಾಗಿ ಸಿಖ್ಖ್ ಸಮುದಾಯ ಪ್ರತಿಭಟನೆ ನಡೆಸಿದ್ದರಿಂದ ವಿಷಯ ಜಾಗತಿಕವಾಗಿ ಗಮನ ಸೆಳೆದಿತ್ತು. ಜತೆಗೆ ಪಾಕ್ನಲ್ಲಿನ ಅಲ್ಪಸಂಖ್ಯಾತರ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವವಾಗಿದ್ದವು.