ಇಸ್ಲಾಮಾಬಾದ್: ಭಾರತ - ಚೀನಾ ನಡುವೆ ಗಡಿ ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ ಜೂನ್ ತಿಂಗಳಲ್ಲಿ ಟಿಕ್ಟಾಕ್ ಸೇರಿದಂತೆ ಇತರ 58 ಚೀನಿ ಆ್ಯಪ್ಗಳ ಮೇಲೆ ಕೇಂದ್ರ ಸರ್ಕಾರ ನಿಷೇಧಿಸಿದೆ. ಇದರ ಬೆನ್ನಲ್ಲೇ ಪಾಕ್ ಕೂಡ ಟಿಕ್ ಟಾಕ್ ಬ್ಲಾಕ್ ಮಾಡಿ ಆದೇಶ ಹೊರಹಾಕಿದೆ.
ಪಾಕಿಸ್ತಾನದಲ್ಲೂ ಚೀನಾ ಆ್ಯಪ್ ಟಿಕ್ -ಟಾಕ್ ಬ್ಲಾಕ್! - ಚೀನಾದ ಟಿಕ್ ಟಾಕ್ ಆ್ಯಪ್ ಬ್ಯಾನ್
ಪಾಕಿಸ್ತಾನದಲ್ಲಿ ದಿಢೀರ್ ಆಗಿ ಚೀನಾದ ವಿಡಿಯೋ ಆ್ಯಪ್ ಟಿಕ್ಟಾಕ್ ಬ್ಲಾಕ್ ಮಾಡಿ ಆದೇಶ ಹೊರಡಿಸಲಾಗಿದೆ. ಈ ಮೂಲಕ ಮಿತ್ರ ರಾಷ್ಟ್ರಕ್ಕೆ ಪಾಕ್ ಟಾಂಗ್ ನೀಡಿದೆ.
Tik Tok Block
ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರ ಇದರ ಬಗ್ಗೆ ಮಾಹಿತಿ ನೀಡಿದ್ದು, ತಕ್ಷಣದಿಂದಲೇ ಚೀನಾದ ಅಪ್ಲಿಕೇಶನ್ ಟಿಕ್ಟಾಕ್ ಅನ್ನು ನಿರ್ಬಂಧಿಸಿದ್ದಾಗಿ ಹೇಳಿದೆ ಎಂದು ಅಲ್ಲಿನ ಸುದ್ದಿವಾಹಿನಿ ವರದಿ ಮಾಡಿದೆ.
ಆನ್ಲೈನ್ ವಿಷಯದ ನಿಯಮ ಅನುಸರಿಸಲು ಕಂಪನಿ ವಿಫಲವಾದ ಕಾರಣ ಹಾಗೂ ಕೆಲವೊಂದು ಕಾನೂನು ಬಾಹಿರವಾಗಿ ವಿಡಿಯೋ ಇದರಲ್ಲಿ ವೈರಲ್ ಆಗುತ್ತಿರುವ ಕಾರಣ ಈ ನಿರ್ಧಾರ ಕೈಗೊಂಡಿರುವುದಾಗಿ ಅದು ಹೇಳಿಕೊಂಡಿದೆ.