ಕರ್ನಾಟಕ

karnataka

ETV Bharat / international

ನಾವಾಗಿ ಯುದ್ಧ ಮಾಡಲ್ಲ, ತಂಟೆಗೆ ಬಂದ್ರೆ ಬಿಡಲ್ಲ: ಭಾರತಕ್ಕೆ ಪಾಕ್​ ವಾರ್ನಿಂಗ್​ - ಪ್ರತ್ಯುತ್ತರ

ಭಾರತ ಯುದ್ಧ ಮಾಡಿದರೆ ಪ್ರತ್ಯುತ್ತರ ನೀಡಲು ಸಿದ್ಧ ಎಂದು ಪಾಕ್​ ಸೇನೆಯ ಮೇಜರ್​ ಜನರಲ್​ ಆಸಿಫ್​ ಘಫೂರ್ ಹೇಳಿದ್ದಾರೆ

ಪಾಕ್​ ಮೇಜರ್​ ಜನರಲ್​ ಆಸಿಫ್​ ಘಫೂರ್

By

Published : Feb 22, 2019, 11:56 PM IST

ಇಸ್ಲಾಮಾಬಾದ್​: ಪುಲ್ವಾಮ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತ ಯುದ್ಧ ಮಾಡಲು ಸನ್ನದ್ಧವಾಗಿದೆ ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಪಾಕ್​ ಸಹ ಭಾರತಕ್ಕೆ ಪ್ರತ್ಯುತ್ತರ ನೀಡಲು ಸಿದ್ಧತೆ ಮಾಡಿಕೊಂಡಿದೆ.

ಆದರೆ ತಾನಾಗಿಯೇ ಯುದ್ಧ ಮಾಡುವುದಿಲ್ಲ ಎಂದಿರುವ ಪಾಕ್​, ತನ್ನ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ ಎಂದು ವಾರ್ನಿಂಗ್​ ಕೊಟ್ಟಿದೆ.

ಪಾಕ್​ ಸೇನೆಯ ಐಎಸ್​ಪಿಆರ್​ನ ಮಹಾನಿರ್ದೇಶಕ ಮೇಜರ್​ ಜನರಲ್​ ಆಸಿಫ್​ ಘಫೂರ್​ ಈ ಬಗ್ಗೆ ಮಾತನಾಡಿ, ಒಂದು ವೇಳೆ ಭಾರತದಿಂದಲೇ ಯುದ್ಧದ ಬೆದರಿಕೆ ಬಂದರೆ ನಾವು ತಕ್ಕ ಪ್ರತಿಕ್ರಿಯೆ ನೀಡುತ್ತೇವೆ ಎಂದಿದ್ದಾರೆ.

ನಾವು ಯುದ್ಧಕ್ಕೆ ತಯಾರಾಗುತ್ತಿಲ್ಲ. ನೀವೇ (ಭಾರತ) ಯುದ್ಧದ ಬೆದರಿಕೆಯೊಡ್ಡುತ್ತಿದ್ದೀರಿ. ನಾವಾಗಿಯೇ ಯುದ್ಧ ಮಾಡುವುದಿಲ್ಲ. ಆದರೆ ನಿಮ್ಮಿಂದ ಯುದ್ಧದ ಬೆದರಿಕೆ ಹೆಚ್ಚಾದರೆ ಅದಕ್ಕೆ ಸರಿಯಾದ ಪ್ರತಿಕ್ರಿಯೆ ನೀಡುವುದು ನಮ್ಮ ಹಕ್ಕು ಎಂದಿದ್ದಾರೆ.

ಬೇಹುಗಾರಿಕೆ ಆರೋಪದ ಮೇಲೆ ಪಾಕ್​ನ ಇಬ್ಬರು ಸೇನಾಧಿಕಾರಿಗಳನ್ನು ಮಿಲಿಟರಿ ಕಸ್ಟಡಿಯಲ್ಲಿ ಇರಿಸಲಾಗಿದೆ. ಸೇನಾ ಮುಖ್ಯಸ್ಥರು ಅವರ ಮೇಲೆ ಕೋರ್ಟ್ ಮಾರ್ಷಲ್​ಗೂ ಆದೇಶ ನೀಡಿದ್ದಾರೆ. ಇಬ್ಬರದೂ ಪ್ರತ್ಯೇಕ ಕೇಸ್​ಗಳಿವೆ. ಆದರೆ ಎರಡಕ್ಕೂ ಪರಸ್ಪರ ಸಂಬಂಧವಿಲ್ಲ ಎಂದು ಹೇಳಿದರು.

ABOUT THE AUTHOR

...view details