ಕರ್ನಾಟಕ

karnataka

ETV Bharat / international

2022ರಲ್ಲಿ ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಪಾಕ್​ ಸಿದ್ಧತೆ..!

2022ರಲ್ಲಿ ಪಾಕಿಸ್ತಾನ ಮಾನವ ಸಹಿತ ಬಾಹ್ಯಾಕಾಶ ಯಾನ ನಡೆಸಲಿದೆ ಎಂದು ಪಾಕ್​​  ಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಚೌಧರಿ ಗುರುವಾರ ಟ್ವೀಟ್ ಮಾಡಿದ್ದಾರೆ.

ಫವಾದ್ ಚೌಧರಿ

By

Published : Jul 26, 2019, 3:20 PM IST

ಇಸ್ಲಾಮಾಬಾದ್:ಭಾರತ ಎರಡನೇ ಬಾರಿಗೆ ಚಂದ್ರನ ಅಂಗಳಕ್ಕೆ ಪ್ರಯಾಣ ನಡೆಸಿದ ಕೆಲ ದಿನಗಳಲ್ಲೇ ನೆರೆಯ ರಾಷ್ಟ್ರ ಪಾಕಿಸ್ತಾನ ಸಹ ಮಾನವ ಸಹಿತ ಬಾಹ್ಯಾಕಾಶ ಯಾನದ ಬಗ್ಗೆ ಮಾಹಿತಿ ನೀಡಿದೆ.

2022ರಲ್ಲಿ ಪಾಕಿಸ್ತಾನ ಮಾನವ ಸಹಿತ ಬಾಹ್ಯಾಕಾಶ ಯಾನ ನಡೆಸಲಿದೆ ಎಂದು ಪಾಕ್​​ ಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಚೌಧರಿ ಗುರುವಾರ ಟ್ವೀಟ್ ಮಾಡಿದ್ದಾರೆ.

ಫೆಬ್ರವರಿ 2020ರಿಂದ ಪಾಕಿಸ್ತಾನವು ಬಾಹ್ಯಾಕಾಶಕ್ಕೆ ಮೊದಲ ಬಾರಿಗೆ ಮಾನವನನ್ನು ಕಳುಹಿಸುವ ಪ್ರಕ್ರಿಯೆ ಆರಂಭಗೊಳಿಸಲಿದ್ದು, ಈ ಕುರಿತಾಗಿ ಸದ್ಯದಲ್ಲೇ ಐವತ್ತು ಮಂದಿಯ ಹೆಸರನ್ನು ಶಾರ್ಟ್​ಲಿಸ್ಟ್​ ಮಾಡಲಾಗುವುದು ಎಂದು ಟ್ವೀಟ್ ಮಾಡಿದ್ಧಾರೆ.

ನಂತರದಲ್ಲಿ 25 ಮಂದಿಯ ಹೆಸರನ್ನು ಅಂತಿಮ ಮಾಡಲಿದ್ದೇವೆ. 2022ರಲ್ಲಿ ಪಾಕಿಸ್ತಾನ ವ್ಯಕ್ತಿಯೋರ್ವ ಬಾಹ್ಯಾಕಾಶಕ್ಕೆ ಕಳುಹಿಸಲಿದ್ದೇವೆ. ಈ ಮೂಲಕ ಪಾಕಿಸ್ತಾನದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಲಿದ ಎಂದು ಫವಾದ್ ಚೌಧರಿ ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details