ಕರ್ನಾಟಕ

karnataka

ETV Bharat / international

ಕಾಶ್ಮೀರಕ್ಕೆ 'ಜಿಹಾದಿಗಳು' ನುಸುಳಲು ಪಾಕ್ ತಂತ್ರ: ಪದೇ ಪದೆ ಕದನ ವಿರಾಮ ಉಲ್ಲಂಘನೆ..? - ಮಹಾಮಾರಿ ಕೊರೊನಾ ವೈರಸ್​ ಹರಡುವಿಕೆ

ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನವು ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ನಿಯಮಿತವಾಗಿ ಉಲ್ಲಂಘಿಸುತ್ತಿದೆ ಎಂದು ಲೇಖಕ ಅಮ್ಜದ್ ಅಯೂಬ್ ಮಿರ್ಜಾ ಆರೋಪಿಸಿದ್ದಾರೆ.

Pakistan coronavirus cases
ಲೇಖಕ ಅಮ್ಜದ್ ಅಯೂಬ್ ಮಿರ್ಜಾ

By

Published : Apr 15, 2020, 3:54 PM IST

ಗ್ಲಾಸ್ಗೋ: ಮಹಾಮಾರಿ ಕೊರೊನಾ ವೈರಸ್​ ಹರಡುವಿಕೆಯ ನಡುವೆ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರನ್ನು ಒಳನುಸುಳಲು, ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನವು ನಿಯಂತ್ರಣ ರೇಖೆಯಲ್ಲಿ ಕದನ ವಿರಾಮವನ್ನು ನಿಯಮಿತವಾಗಿ ಉಲ್ಲಂಘಿಸುತ್ತಿದೆ ಎಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ರಾಜಕೀಯ ಕಾರ್ಯಕರ್ತ ಮತ್ತು ಲೇಖಕ ಅಮ್ಜದ್ ಅಯೂಬ್ ಮಿರ್ಜಾ ಆರೋಪಿಸಿದ್ದಾರೆ.

ಯಾವಾಗಲೂ ಪಾಕಿಸ್ತಾನವು ಕದನ ವಿರಾಮ ಉಲ್ಲಂಘನೆಯನ್ನು ಪ್ರಾರಂಭಿಸುತ್ತದೆ ಎಂಬುದು ಪಿಒಕೆ ಜನರಿಗೆ ತಿಳಿದಿದೆ. ಕದನ ವಿರಾಮ ರೇಖೆಯ ವ್ಯಾಪ್ತಿಗೆ ಬರದ ಜಮ್ಮುವಿನ ಪ್ರದೇಶಗಳಲ್ಲಿ ಸ್ಥಳೀಯರು ಇದರಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಇನ್ನು ಪಾಕಿಸ್ತಾನ ನಡೆಸಿದ ಭೀಕರ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದ ಅವರು, ಪಾಕಿಸ್ತಾನ ಈ ರೀತಿ ಮಾಡಲು ಮೂರು ಕಾರಣಗಳಿವೆ ಎಂದು ತಿಳಿಸಿದ್ದಾರೆ. ಮೊದಲನೆಯದಾಗಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ, ಅದರ ದುರುಪಯೋಗವನ್ನು ಪಾಕಿಸ್ತಾನವು ಪಡೆಯುತ್ತಿದೆ, ಹಾಗೂ ಪಾಕಿಸ್ತಾನವು ಸರಿಯಾದ ಆಸ್ಪತ್ರೆಗಳನ್ನು ಹೊಂದಿಲ್ಲ. ಹಾಗೂ ಯಾವುದೇ ಕ್ವಾರಂಟೈನ್ ಅಥವಾ ವೆಂಟಿಲೇಟರ್‌ಗಳನ್ನು ಹೊಂದಿಲ್ಲ. ಆದ್ದರಿಂದ ಪಾಕಿಸ್ತಾನವು ಕದನ ವಿರಾಮವನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದ್ದಾರೆ.

ABOUT THE AUTHOR

...view details