ಕರ್ನಾಟಕ

karnataka

ETV Bharat / international

ಕೋವಿಡ್-19 ತಡೆಯಲು ಪಾಕ್ ನೂತನ ಕಾನೂನು.. ನಿಯಮ ಉಲ್ಲಂಘಿಸಿದ್ರೆ ಲಕ್ಷಾಂತರ ರೂಪಾಯಿ ದಂಡ - ಪಾಕಿಸ್ತಾನದಲ್ಲಿ ಕೊರೊನಾ ಸೋಂಕು

ಕೋವಿಡ್-19 ಹರಡುವುದನ್ನು ತಡೆಯಲು ಪಾಕ್​ ಸರ್ಕಾರ ನಿರ್ದೇಶಿಸಿರುವ ನಿಯಮಗಳನ್ನು ಉಲ್ಲಂಘಿಸಿದರೆ ಲಕ್ಷಾಂತರ ರೂಪಾಯಿ ದಂಡ ವಿಧಿಸುವಂತ ಕಾನೂನು ಜಾರಿಗೆ ತರಲಾಗಿದೆ.

Pak style of combating Covid-19
ಕೋವಿಡ್-19 ತಡೆಯಲು ಪಾಕ್ ನೂತನ ಕಾನೂನು

By

Published : Mar 30, 2020, 2:10 PM IST

ಪಂಜಾಬ್ ಪ್ರಾಂತ್ಯ(ಪಾಕಿಸ್ತಾನ): ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಸರ್ಕಾರದ ನಿರ್ದೇಶನಗಳನ್ನು ಪಾಲಿಸಲು ವಿಫಲರಾದ ಜನರಿಗೆ ದಂಡ ಮತ್ತು ಜೈಲು ಶಿಕ್ಷೆ ಸೇರಿದಂತೆ ಕಠಿಣ ಕ್ರಮಗಳನ್ನು ವಿಧಿಸಲಾಗಿದೆ.

2020ರ ಪಂಜಾಬ್ ಸಾಂಕ್ರಾಮಿಕ ರೋಗಗಳ (ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಸುಗ್ರೀವಾಜ್ಞೆ ಘೋಷಿಸಿದ್ದು, ನಾಗರಿಕ ಆಡಳಿತ ಮತ್ತು ಆರೋಗ್ಯ ಇಲಾಖೆಗೆ ದೇಶದಲ್ಲಿ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಅವಕಾಶವಿದೆ ಎಂದು ಹೇಳಲಾಗಿದೆ.

ಸ್ಥಳೀಯ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಸರ್ಕಾರದ ನಿರ್ದೇಶನ ಉಲ್ಲಂಘಿಸಿದರೆ ದಂಡ ಮತ್ತು ಜೈಲು ಶೀಕ್ಷೆ ವಿಧಿಸಲಾಗುತ್ತದೆ. ಮೊದಲ ಬಾರಿ ನಿಯಮ ಉಲ್ಲಂಘಿಸಿದ್ರೆ 2 ತಿಂಗಳು ಜೈಲು ಅಥವಾ 50 ಸಾವಿರ ದಂಡ ಇಲ್ಲವೇ ಎರಡನ್ನೂ ವಿಧಿಸಬಹುದು. ಎರಡನೇ ಭಾರಿ ನಿಯಮ ಉಲ್ಲಂಘಿಸಿದರೆ 1 ಲಕ್ಷ ದಂಡ , 6 ತಿಂಗಳು ಜೈಲು ಅಥವಾ ಎರಡನ್ನೂ ವಿಧಿಸಬಹುದು.

ಇತ್ತ ಯಾವುದಾದರು ಸಂಸ್ಥೆ ಈ ನಿಯಮವನ್ನು ಉಲ್ಲಂಘಿಸಿದರೆ 50 ಸಾವಿರದಿಂದ 2 ಲಕ್ಷದವರೆಗೆ ದಂಡ. ಎರಡನೇ ಭಾರಿ ನಿಯಮ ಉಲ್ಲಂಘಿಸಿದರೆ 1 ಲಕ್ಷದಿಂದ 3 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ ಎಂದು ಕಾನೂನಿನಲ್ಲಿ ತಿಳಿಸಲಾಗಿದೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಸುಮಾರು 593 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ABOUT THE AUTHOR

...view details