ಲಾಹೋರ್:ಪಾಕಿಸ್ತಾನದ ಹಿರಿಯ ಪೊಲೀಸ್ ಅಧಿಕಾರಿ ಮುಫಖರ್ ಅದಿಲ್ ಮತ್ತು ಮಾಜಿ ಸಹಾಯಕ ಅಟಾರ್ನಿ ಜನರಲ್ ಶಹಬಾಜ್ ಅಹ್ಮದ್ ತತ್ಲಾ ಅವರನ್ನು ಅಪರಿಚಿತ ವ್ಯಕ್ತಿಗಳು ಅಪಹರಣ ಮಾಡಿದ್ದಾರೆ.
ಪಾಕ್ನ ಹಿರಿಯ ಪೊಲೀಸ್ ಅಧಿಕಾರಿ, ಮಾಜಿ ಸಹಾಯಕ ಅಟಾರ್ನಿ ಜನರಲ್ ಅಪಹರಣ - ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಪಹರಣ
ಪಾಕಿಸ್ತಾನದ ಲಾಹೋರ್ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಮಾಜಿ ಸಹಾಯಕ ಅಟಾರ್ನಿ ಜನರಲ್ ಅಪಹರಣಗೊಂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಲಾಹೋರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅದಿಲ್ ಮತ್ತು ಅವರ ಸ್ನೇಹಿತ ತತ್ಲಾ ಅವರನ್ನು ಒಂದೆರಡು ದಿನಗಳ ಹಿಂದೆ ನಿಗೂಢವಾಗಿ ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ತನಿಖೆ ಕೈಗೊಂಡಿದ್ದು, ಜೊಹಾರ್ ಮತ್ತು ನಸೀರಬಾದ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಪ್ರಕರಣ ದಾಖಲಾಗಿವೆ.
ಪೊಲೀಸ್ ವರಿಷ್ಠಾಧಿಕಾರಿ ಅದಿಲ್ ಅವರು ಬಳಸುತ್ತಿದ್ದ ಸರ್ಕಾರಿ ವಾಹನವು ಶಾಪಿಂಗ್ ಮಾಲ್ ಬಳಿ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಇಬ್ಬರು ಅಧಿಕಾರಿಗಳ ಮೊಬೈಲ್ ಫೋನ್ಗಳು ಸ್ವಿಚ್ ಆಫ್ ಆಗಿವೆ. ಪ್ರಕಣದ ಕುರಿತು ಮಹತ್ಯವದ ಸುಳಿವು ದೊರಕಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.