ETV Bharat Karnataka

ಕರ್ನಾಟಕ

karnataka

ETV Bharat / international

ಪ್ಯಾಂಗಾಂಗ್​ ಸರೋವರದಿಂದ ಕಾಲ್ಕಿತ್ತ ಚೀನಾ ಬೆನ್ನಲ್ಲೇ ಪಾಕ್​ ಪ್ರಧಾನಿ ಶಾಂತಿ ಮಂತ್ರ! - ಭಾರತಕ್ಕೆ ಇಮ್ರಾನ್ ಖಾನ್ ಸಂವಾದ

ಪಾಕಿಸ್ತಾನವು ಯಾವಾಗಲೂ ಶಾಂತಿಗಾಗಿ ಕೈಚಾಚಿ ನಿಂತಿದೆ. ಸಂಭಾಷಣೆಯ ಮೂಲಕ ಬಾಕಿ ಇರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಮುಂದುವರಿಯಲು ಸಿದ್ಧವಾಗಿದೆ..

Imran Modi
Imran Modi
author img

By

Published : Feb 27, 2021, 9:02 PM IST

ಇಸ್ಲಾಮಾಬಾದ್ :ಭಾರತ ಹಾಗೂ ಚೀನಾ ನಡುವೆ ಕಳೆದ 9 ತಿಂಗಳಿಂದ ಇದ್ದ ಯುದ್ಧ ಭೀತಿಯ ವಾತಾವರಣ ಇದೀಗ ತಣ್ಣಗಾಗಿದೆ. ಮತ್ತೊಂದೆಡೆ ಗಡಿಯಲ್ಲಿ ತಂಟೆ ತೆಗೆಯುತ್ತಿದ್ದ ಪಾಕಿಸ್ತಾನ ಶಾಂತಿಯ ಮಂತ್ರ ಜಪಿಸುತ್ತಿದೆ.

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಭಾರತದೊಂದಿಗಿನ ಬಾಕಿ ಇರುವ ಎಲ್ಲಾ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ತಮ್ಮ ಮುಕ್ತ ಮಾತುಕತೆಯ ಪ್ರಸ್ತಾಪವನ್ನು ನವೀಕರಿಸಿದ್ದಾರೆ.

ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತೀಯ ಮತ್ತು ಪಾಕಿಸ್ತಾನದ ಗಡಿ ಭದ್ರತಾ ಪಡೆಗಳ ನಡುವೆ ಇತ್ತೀಚೆಗೆ ಘೋಷಿಸಲಾದ ಕದನ ವಿರಾಮವನ್ನು ಸ್ವಾಗತಿಸಿ ಖಾನ್ ತಮ್ಮ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಮಾ.1ರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ : ವ್ಯಾಕ್ಸಿನ್ ದರದ ಗೊಂದಲ ಸುಖಾಂತ್ಯ

ಪಾಕಿಸ್ತಾನವು ಯಾವಾಗಲೂ ಶಾಂತಿಗಾಗಿ ಕೈಚಾಚಿ ನಿಂತಿದೆ. ಸಂಭಾಷಣೆಯ ಮೂಲಕ ಬಾಕಿ ಇರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಮುಂದುವರಿಯಲು ಸಿದ್ಧವಾಗಿದೆ ಎಂದು ಹೇಳಿದರು.

ಮುಂದಿನ ಪ್ರಗತಿಗೆ ಅನುವು ಮಾಡಿಕೊಡುವ ವಾತಾವರಣವನ್ನು ಸೃಷ್ಟಿಸುವ ಜವಾಬ್ದಾರಿ ಭಾರತದ ಮೇಲಿದೆ ಎಂದರು. ವಿವಾದಿತ ಎಲ್‌ಒಸಿ ಉದ್ದಕ್ಕೂ 2021ರ ಫೆಬ್ರವರಿ 25ರಿಂದ ಕದನ ವಿರಾಮ ಜಾರಿಗೆ ತರಲು ಉಭಯ ದೇಶಗಳ ಡೈರೆಕ್ಟರ್ ಜನರಲ್ ಫಾರ್ ಮಿಲಿಟರಿ ಆಪರೇಷನ್ಸ್ (ಡಿಜಿಎಂಒ) ಪರಸ್ಪರ ಒಪ್ಪಿಗೆ ಸೂಚಿಸಿದ ನಂತರ ಖಾನ್ ಅವರು, ಭಾರತಕ್ಕೆ ಮಾತುಕತೆಯ ಹೊಸ ಪ್ರಸ್ತಾಪ ಮುಂದಿಟ್ಟಿದ್ದಾರೆ.

ABOUT THE AUTHOR

...view details