ಕರ್ನಾಟಕ

karnataka

ETV Bharat / international

ಮಹಿಳೆಯರು ತುಂಡು ಬಟ್ಟೆ ಹಾಕಿಕೊಳ್ಳುವುದೇ ಅತ್ಯಾಚಾರಕ್ಕೆ ಕಾರಣ:  ಪಾಕ್ ಪಿಎಂ ಟ್ರೋಲ್​

ಪಾಕಿಸ್ತಾನದಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯದಂತಹ ಪ್ರಕರಣ ಹೆಚ್ಚಾಗಲು ಮಹಿಳೆಯರು ತುಂಡು ಬಟ್ಟೆ ಹಾಕಿಕೊಳ್ಳುವುದೇ ಮುಖ್ಯ ಕಾರಣ ಎಂದು ಪಾಕ್ ಪ್ರಧಾನಿ ಹೇಳಿಕೆ ನೀಡಿದ್ದಾರೆ. ಇವರ ಹೇಳಿಕೆಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

Pak PM
Pakistan PM

By

Published : Jun 21, 2021, 4:40 PM IST

ಇಸ್ಲಾಮಾಬಾದ್​: ಸದಾ ಒಂದಿಲ್ಲೊಂದು ವಿವಾದಿತ ಹೇಳಿಕೆ ನೀಡಿ, ಜನರ ಕೆಂಗಣ್ಣಿಗೆ ಗುರಿಯಾಗುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್​ ಸದ್ಯ ಮತ್ತೊಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಪಾಕ್​​ನಲ್ಲಿ ಹೆಚ್ಚಿನ ಅತ್ಯಾಚಾರ ಪ್ರಕರಣ ಹಾಗೂ ಲೈಂಗಿಕ ದೌರ್ಜನ್ಯ ನಡೆಯುವುದಕ್ಕೆ ಅವರು ಹಾಕಿಕೊಳ್ಳುವ ಬಟ್ಟೆಗಳು ಮುಖ್ಯ ಕಾರಣ ಎಂದಿದ್ದಾರೆ. ಇದರಿಂದ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಅವರು ಟ್ರೋಲ್​ಗೊಳಗಾಗಿದ್ದಾರೆ.

ಖಾಸಗಿ ಸಂದರ್ಶನವೊಂದರಲ್ಲಿ ಭಾಗಿಯಾಗಿ ಮಾತನಾಡಿರುವ ಇಮ್ರಾನ್​ ಖಾನ್​, ಮಹಿಳೆಯರು ಹಾಕಿಕೊಳ್ಳುವ ಕಡಿಮೆ ಬಟ್ಟೆ(ತುಂಡು ಬಟ್ಟೆ) ಪುರುಷರ ಮೇಲೆ ಪ್ರಭಾವ ಬೀರುತ್ತಿದೆ. ಇದರಿಂದ ಪ್ರಚೋದನೆಗೊಳಗಾಗಿ ಅತ್ಯಾಚಾರದಂತಹ ಕೃತ್ಯಗಳು ನಡೆಯುತ್ತಿವೆ ಎಂದಿದ್ದಾರೆ.

ಜತೆಗೆ ಪುರುಷರು ಏನು ರೋಟೋಟ್​ಗಳಲ್ಲ ಎಂದಿರುವ ಇಮ್ರಾನ್​ ಖಾನ್​, ಮಹಿಳೆಯರಿಂದ ಪ್ರಚೋದನೆಗೊಳಗಾಗಿ ಅತ್ಯಾಚಾರ ಮಾಡಲು ಮುಂದಾಗುತ್ತಾರೆ ಎಂದಿದ್ದಾರೆ. ಇವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ಗೆ ಕಾರಣವಾಗಿದ್ದು, ಅನೇಕರು ವಿವಿಧ ರೀತಿಯಲ್ಲಿ ಕಮೆಂಟ್​ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ನ್ಯಾಯಶಾಸ್ತ್ರಜ್ಞರ ಆಯೋಗದ ದಕ್ಷಿಣ ಏಷ್ಯಾದ ಕಾನೂನು ಸಲಹೆಗಾರ್ತಿ ರೀಮಾ ಓಮರ್​ ಟ್ವೀಟ್​ ಮಾಡಿ ಮಾಹಿತಿ ಹೊರ ಹಾಕಿದ್ದಾರೆ.

ಪಾಕ್​ ಪ್ರಧಾನಿ ವಿವಾದಿತ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಆಕ್ರೋಶಕ್ಕೆ ಕಾರಣವಾಗಿದ್ದು, ಅನೇಕ ಮಹಿಳೆಯರು ಅವರ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆದರೆ, ಪಾಕ್​ ಪ್ರಧಾನಿ ನೀಡಿರುವ ಹೇಳಿಕೆಯನ್ನ ತಿರುಚಲಾಗಿದೆ ಎಂದು ಪಾಕ್ ಪ್ರಧಾನಿ ಕಚೇರಿ ಮಾಹಿತಿ ಹಂಚಿಕೊಂಡಿದೆ. ಇಮ್ರಾನ್ ಖಾನ್ ಈ ಹಿಂದೆ ಕೂಡ ಅನೇಕ ಸಲ ಇದೇ ರೀತಿಯ ವಿವಾದಿತ ಹೇಳಿಕೆ ನೀಡಿ, ಮಹಿಳೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ABOUT THE AUTHOR

...view details