ಇಸ್ಲಾಮಾಬಾದ್:ಹೆನ್ಲಿ ಪಾಸ್ಪೋರ್ಟ್ ಸಂಸ್ಥೆ,ಜಗತ್ತಿನಲ್ಲಿ ಅತ್ಯಂತ ಕಳಪೆ ಪಾಸ್ಪೋರ್ಟ್ ಹೊಂದಿರುವ ರಾಷ್ಟ್ರಿಗಳ ಸೂಚ್ಯಂಕ ಶ್ರೇಣಿಪಟ್ಟಿಯನ್ನು ಬಿಡುಗಡೆ ಮಾಡಿದೆ.
ಜಗತ್ತಿನ ಕಳಪೆ ಪಾಸ್ಪೋರ್ಟ್: ಅಗ್ರ ಶ್ರೇಣಿಯಲ್ಲಿ ಪಾಕಿಸ್ತಾನ... ಪಾಕ್ನತ್ತ ಕ್ಯಾರೆಯೆನ್ನದ ವಿದೇಶಿಗರು - ವಿದೇಶ ಪ್ರವಾಸ
ಅತಿ ಕಡಿಮೆ ಪಾಸ್ಪೋರ್ಟ್ ವಿತರಿಸಿದ ದೇಶಗಳ ಸಾಲಿನಲ್ಲಿ ನೆರೆಯ ಪಾಕಿಸ್ತಾನ 4ನೇ ಸ್ಥಾನಪಡೆದಿದೆ. ಪ್ರವಾಸಕ್ಕೆ ಸೂಕ್ತವಾದ ರಾಷ್ಟ್ರಗಳು ಯಾವುವು ಎಂಬುದರ ಪಟ್ಟಿ ಸಹ ಬಿಡುಗಡೆ ಮಾಡಲಾಗಿದೆ. ವೀಸಾ ವಿತರಣೆಯಲ್ಲಿ ಪಾಕ್ ಪಾತಳಕ್ಕೆ ಕುಸಿದಿದ್ದು, ಪಾಕಿಸ್ತಾನದ ಪಾಸ್ಪೋರ್ಟ್ ಪಡೆಯುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಹೆನ್ಲಿ ಪಾಸ್ಪೋರ್ಟ್ ತಿಳಿಸಿದೆ.
ಈ ಸೂಚ್ಯಂಕದಲ್ಲಿ ಅತಿ ಕಡಿಮೆ ಪಾಸ್ಪೋರ್ಟ್ ವಿತರಿಸಿದ ದೇಶಗಳ ಸಾಲಿನಲ್ಲಿ ನೆರೆಯ ಪಾಕಿಸ್ತಾನ 4ನೇ ಸ್ಥಾನಪಡೆದಿದೆ. ಜಾಗತಿಕ ಪ್ರವಾಸಕ್ಕೆ ಸೂಕ್ತವಾದ ರಾಷ್ಟ್ರಗಳು ಯಾವುವು ಎಂಬುದರ ಪಟ್ಟಿ ಸಹ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಪಾಕ್ ಪಾತಳಕ್ಕೆ ಕುಸಿದಿದ್ದು, ಪಾಕಿಸ್ತಾನದ ಪಾಸ್ಪೋರ್ಟ್ ಪಡೆಯುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ತಿಳಿಸಿದೆ.
ಸೂಚ್ಯಂಕ ಶ್ರೇಣಿಯನ್ನು ಜಗತಿನ ಅತ್ಯಂತ ಪ್ರವಾಸಿ ಸ್ನೇಹಿ ಪಾಸ್ಪೋರ್ಟ್ ಮಾನದಂಡದಡಿ ತಯಾರಿಸಲಾಗಿದೆ. ಉಗ್ರರ ನೆಲೆಗಳನ್ನು ಹೊಂದಿರುವ ಪಾಕಿಸ್ತಾನ ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಸಿರಿಯಾ, ಇರಾಕ್, ಅಫ್ಘಾನ್ ಕ್ರಮವಾಗಿ ಮೊದಲ ಅಗ್ರಸ್ಥಾನದಲ್ಲಿವೆ. ಪಾಕ್ ಜೊತೆಗೆ ಸೋಮಾಲಿಯಾ ಕೂಡ ಜಂಟಿಯಾಗಿ ನಾಲ್ಕನೇ ಸ್ಥಾನ ಪಡೆದಿದೆ.