ಕರಾಚಿ (ಪಾಕಿಸ್ತಾನ): ವೈಯಕ್ತಿಕ ದ್ವೇಷದಿಂದ ಪಾಕಿಸ್ತಾನದ ನ್ಯೂಸ್ ಆ್ಯಂಕರ್ನನ್ನು ಗುಂಡಿಕ್ಕಿ ಕೊಂದಿರುವ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ.
ಬೋಲ್ ನ್ಯೂಸ್ ಚಾನೆಲ್ನ ಮುರೀದ್ ಅಬ್ಬಾಸ್ ಎಂಬಾತನನ್ನು ಕರಾಚಿಯ ಖಯಾಬನ್-ಇ-ಕುಖಾರಿ ಏರಿಯಾದಲ್ಲಿ ನಿನ್ನೆ ರಾತ್ರಿ ಗುಂಡಿಕ್ಕಿ ಕೊಲೆ ಮಾಡಲಾಗಿದೆ.
ಘಟನೆಯಲ್ಲಿ ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಅಬ್ಬಾಸ್ನ ಸ್ನೇಹಿತ ಖಿಝರ್ ಹಯಾತ್ ಸಹ ಮೃತಪಟ್ಟಿದ್ದಾನೆ.
ಅಬ್ಬಾದ್ ಕೆಲವರೊಂದಿಗೆ ಹಣಕಾಸಿನ ವಿಚಾರವಾಗಿ ವೈರತ್ವ ಕಟ್ಟಿಕೊಂಡಿದ್ದ ಎಂದು ಆತನ ಸ್ನೇಹಿತರು ಹೇಳಿದ್ದಾರೆ. ಈ ಮಾಹಿತಿ ಅಧರಿಸಿ ಕೆಲವರನ್ನು ವಶಕ್ಕೆ ಪಡೆಯಲಾಗಿದೆಡಿಐಜಿ ಶರ್ಜೀಲ್ ಖರಾಲ್ ಮಾಹಿತಿ ನೀಡಿದ್ದಾರೆ.