ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಈವರೆಗೆ 1,495 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಅಲ್ಲಿನ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ 1,495 ಮಂದಿಗೆ ಬಾಧಿಸಿದ ಕೊರೊನಾ ಸೋಂಕು - pakistan
ಪಾಕಿಸ್ತಾನದಲ್ಲಿ ಈವರೆಗೆ 1,495 ಮಂದಿಗೆ ಕೊರೊನಾ ವೈರಸ್ ಬಾಧಿಸಿದೆ ಎಂದು ಅಲ್ಲಿನ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
![ಪಾಕಿಸ್ತಾನದಲ್ಲಿ 1,495 ಮಂದಿಗೆ ಬಾಧಿಸಿದ ಕೊರೊನಾ ಸೋಂಕು Pak has over 12,000 suspected cases, says top health official as positive infections reach 1,495](https://etvbharatimages.akamaized.net/etvbharat/prod-images/768-512-6580437-thumbnail-3x2-corona.jpg)
ಸರ್ಕಾರದ ಆರೋಗ್ಯ ಸಲಹೆಗಾರ ಜಾಫರ್ ಮಿರ್ಜಾ, ದೇಶದಲ್ಲಿ ಸೋಂಕಿನ ಪ್ರಮಾಣ ಮತ್ತು ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ತೆಗೆದುಕೊಂಡ ಕ್ರಮಗಳನ್ನುದ್ದೇಶಿಸಿ ಮಾತನಾಡಿದ್ರು. ದೇಶದಲ್ಲಿ ಇದುವರೆಗೆ ದಾಖಲಾದ ಒಟ್ಟು 12,218 ಕೊರೊನಾ ಶಂಕಿತ ಪ್ರಕರಣಗಳಲ್ಲಿ ಹೆಚ್ಚಿನವರು ಇರಾನ್ನಿಂದ ದೇಶಕ್ಕೆ ವಾಪಸ್ಸಾಗಿದ್ದವರಿಗೆ ಸೇರಿದ್ದು ಎಂದು ತಿಳಿಸಿದ್ದಾರೆ.
ಪಂಜಾಬ್‌ನಲ್ಲಿ 557 ಪ್ರಕರಣ, ಸಿಂಧ್‌ನಲ್ಲಿ 469, ಖೈಬರ್-ಪಖ್ತುನ್ಖ್ವಾ (ಕೆಪಿ) ಯಲ್ಲಿ 188, ಬಲೂಚಿಸ್ತಾನದಲ್ಲಿ 133, ಗಿಲ್ಗಿಟ್-ಬಾಲ್ಟಿಸ್ತಾನ್‌ನಲ್ಲಿ 107, ಇಸ್ಲಾಮಾಬಾದ್‌ನಲ್ಲಿ 39 ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ 2 ಪ್ರಕರಣಗಳು ಪತ್ತೆಯಾಗಿವೆ.