ಕರ್ನಾಟಕ

karnataka

ETV Bharat / international

ಭೂ ಹಗರಣದಲ್ಲಿ ಮಾಜಿ ಪ್ರಧಾನಿ ನವಾಬ್​ ಷರೀಫ್​ಗೆ​​​​ ಜಾಮೀನು ರಹಿತ ವಾರಂಟ್​ ಜಾರಿ - ಷರೀಪ್​ ಅನಾರೋಗ್ಯ

ಕೋರ್ಟ್ ವಿಚಾರಣೆಯ ಸಮಯದಲ್ಲಿ ಸಮನ್ಸ್ ಕುರಿತಂತೆ ಮಾಹಿತಿ ನೀಡಿದ ಪೊಲೀಸರು. ಷರೀಫ್ ನಿವಾಸಗಳಾದ ಮಾಡೆಲ್ ಟೌನ್​ ಹಾಗೂ ಉಮ್ರಾಗಳಲ್ಲಿ ಅವರ ಅನುಪಸ್ಥಿತಿಯ ಕಾರಣ ಸಮನ್ಸ್ ನೀಡಲು ಸಾಧ್ಯವಾಗಿಲ್ಲ ಎಂದಿದ್ದಾರೆ. ಈ ವೇಳೆ, ನ್ಯಾಯಮೂರ್ತಿ ಅಸದ್ ಅಲಿ, ಇಲ್ಲಿನ ಹಾಗೂ ವಿದೇಶದಲ್ಲಿರುವ ನಿವಾಸಗಳಿಗೆ ಸಮನ್ಸ್ ನೀಡುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.

Pak court issues bailable arrest warrant against Sharif in land case
ಭೂ ಹಗರಣದಲ್ಲಿ ಮಾಜಿ ಪ್ರಧಾನಿ ನವಾಬ್​ ಷರೀಫ್​ಗೆ​​​​ ಜಾಮೀನು ರಹಿತ ವಾರಂಟ್​ ಜಾರಿ

By

Published : Aug 21, 2020, 6:00 PM IST

ಲಾಹೋರ್: 1986ರಲ್ಲಿ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿದ್ದಾಗ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ 34 ವರ್ಷದ ಭೂ ಹಂಚಿಕೆ ಪ್ರಕರಣದಲ್ಲಿ ಮಾಜಿ ಪ್ರಧಾನಿ ನವಾಜ್ ಷರೀಫ್ ವಿರುದ್ಧ ಪಾಕಿಸ್ತಾನ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.

ಪ್ರಕರಣ ಸಂಬಂಧ ಷರೀಪ್​ ಅವರ ಎಲ್ಲ ವಿಳಾಸಗಳಿಗೂ ಸಮನ್ಸ್ ಪ್ರತಿ ನೀಡಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ನ್ಯಾಯಾಲಯ ಪೊಲೀಸರಿಗೆ ತಿಳಿಸಿದೆ. ಇನ್ನೂ ಈ ಪ್ರಕರಣದಲ್ಲಿ ಜಂಗ್​​/ಜಿಯೋ ಮಾಧ್ಯಮ ಸಮೂಹದ ಮಾಲಿಕ ಮಿರ್ ಶಕೀಲೂರ್ ರೆಹಮಾನ್​ ಸಹ ಭಾಗಿ ಆರೋಪ ಎದುರಿಸುತ್ತಿದ್ದು, ಆತನನ್ನು ಬಂಧಿಸಲಾಗಿದೆ.

ಕೋರ್ಟ್ ವಿಚಾರಣೆಯ ಸಮಯದಲ್ಲಿ ಸಮನ್ಸ್ ಕುರಿತಂತೆ ಮಾಹಿತಿ ನೀಡಿದ ಪೊಲೀಸರು. ಷರೀಫ್ ನಿವಾಸಗಳಾದ ಮಾಡೆಲ್ ಟೌನ್​ ಹಾಗೂ ಉಮ್ರಾಗಳಲ್ಲಿ ಅವರ ಅನುಪಸ್ಥಿತಿಯ ಕಾರಣ ಸಮನ್ಸ್ ನೀಡಲು ಸಾಧ್ಯವಾಗಿಲ್ಲ ಎಂದಿದ್ದಾರೆ. ಈ ವೇಳೆ, ನ್ಯಾಯಮೂರ್ತಿ ಅಸದ್ ಅಲಿ, ಇಲ್ಲಿನ ಹಾಗೂ ವಿದೇಶದಲ್ಲಿರುವ ನಿವಾಸಗಳಿಗೆ ಸಮನ್ಸ್ ನೀಡುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.

ಇದೇ ವೇಳೆ, ಮಾರ್ಚ್​ನಲ್ಲಿ ಬಂಧನವಾಗಿರುವ ಶಕೀಲೂರ್ ರೆಹಮಾನ್​​ ಬಂಧನದ ಅವಧಿಯನ್ನು ಸೆಪ್ಟೆಂಬರ್ 3ರ ವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಇನ್ನು ಕೋಟ್ ಲಖ್‌ಪತ್ ಜೈಲಿನಲ್ಲಿ 7 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಅಲ್ - ಅಜೀಜಿಯಾ ಮಿಲ್ಸ್ ಭ್ರಷ್ಟಾಚಾರ ಪ್ರಕರಣದಲ್ಲಿ ಷರೀಫ್‌ಗೆ ಜಾಮೀನು ನೀಡಲಾಗಿದೆ. ಇದಲ್ಲದೇ ಲಂಡನ್​​ನಲ್ಲಿ ಅನಾರೋಗ್ಯ ಹಿನ್ನೆಲೆ ಚಿಕಿತ್ಸೆ ಪಡೆಯಲು 4 ವಾರಗಳ ಅನುಮತಿ ಕೋರಿ ತೆರಳಿದ್ದರು.

ನವಾಜ್ ಷರೀಫ್ ಅವರ ವೈದ್ಯಕೀಯ ವರದಿಯನ್ನು ಲಂಡನ್‌ನಲ್ಲಿರುವ ವೈದ್ಯರಿಂದ ಪ್ರಸ್ತುತಪಡಿಸದೇ ಜಾಮೀನು ಅವಶ್ಯಕತೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸರ್ಕಾರವು ಪರಾರಿಯಾಗಿದ್ದಾನೆ ಎಂದು ಈ ಹಿಂದೆ ಘೋಷಣೆ ಮಾಡಿತ್ತು.

ABOUT THE AUTHOR

...view details