ಇಸ್ಲಾಮಾಬಾದ್(ಪಾಕಿಸ್ತಾನ): ಸುಮ್ಮನಿರಲಾರದೆ ತಮ್ಮ ತಪ್ಪು ಗ್ರಹಿಕೆಯಿಂದ ವಿಡಿಯೋವೊಂದು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದ ಪಾಕಿಸ್ತಾನದ ಇಂಟರ್ ಸರ್ವೀಸ್ ಪಬ್ಲಿಕ್ ರಿಲೇಷನ್ಸ್ನ ಡೈರೆಕ್ಟರ್ ಜನರಲ್ ಆಸಿಫ್ ಘಫೂರ್ ನೆಟ್ಟಿಗರಿಂದ ಅಪಹಾಸ್ಯಕ್ಕೊಳಗಾಗಿದ್ದಾರೆ.
ಭಾರತೀಯ ಸೇನಾಪಡೆಯ ನಿವೃತ್ತ ಏರ್ ಮಾರ್ಷಲ್ ದೆಂಜಿಲ್ ಕೀಲರ್ ಅವರ ವಿಡಿಯೋವೊಂದನ್ನು ಪೋಸ್ಟ್ ಮಾಡಿ, ಭಾರತೀಯ ವೈಫಲ್ಯದ ಬಗ್ಗೆ ಮಾತನಾಡಿದ್ದಾರೆ ಎಂದು ಘಫೂರ್ ಟ್ವೀಟ್ ಮಾಡಿದ್ದರು. ಬಾಲಕೋಟ್ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ಉಂಟಾದ ಉದ್ವಿಗ್ನತೆ ಕುರಿತು ಕೀಲರ್ ಮಾತಾಡಿದ್ದಾರೆ ಎಂದು ಘಪೂರ್ ಬರೆದುಕೊಂಡಿದ್ದರು. ಪಾಕ್ ಕಪಿಮುಷ್ಠಿಗೆ ಸಿಲುಕಿದ್ದ ವಿಂಗ್ ಕಮ್ಯಾಂಡರ್ ಅಭಿನಂದನ್ರ ವಿಡಿಯೋವನ್ನೂ ಇದಕ್ಕೆ ಜೋಡಿಸಿದ್ದರು.