ಇಸ್ಲಾಮಾಬಾದ್ (ಪಾಕಿಸ್ತಾನ):ಈದ್ ಸಂದರ್ಭದಲ್ಲಿ, ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ, ಪೂನಾ ವಲಯದ ಲೈನ್ ಆಫ್ ಕಂಟ್ರೋಲ್ ಭೇಟಿ ನೀಡಿ ಕಾಶ್ಮೀರವನ್ನು ನಮ್ಮಿಂದ ಕಸಿದುಕೊಳ್ಳುವಂತಿಲ್ಲ ಎಂದಿದ್ದಾರೆ.
ನಮ್ಮಿಂದ ಕಾಶ್ಮೀರ ಕಸಿದುಕೊಳ್ಳುವುದು ಅಸಾಧ್ಯ: ಈದ್ ದಿನವೇ ವಿವಾದಕ್ಕೆ ತುಪ್ಪ ಸುರಿದ ಪಾಕ್ ಸೇನಾಧಿಕಾರಿ - ಪೂನಾ ವಲಯದ ಲೈನ್ ಆಫ್ ಕಂಟ್ರೋಲ್
ಭಾರತೀಯ ಭದ್ರತಾ ಪಡೆಗಳು ಪಾಕಿಸ್ತಾನ ಪ್ರಾಯೋಜಿತ ಉಗ್ರರನ್ನು ಹತ್ಯೆ ಮಾಡಿರುವ ಬೆನ್ನಲ್ಲೇ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಲೈನ್ ಆಫ್ ಕಂಟ್ರೋಲ್ಗೆ ಭೇಟಿ ನೀಡಿದ್ದಾರೆ.
ಪಾಕ್
ಭಾರತೀಯ ಭದ್ರತಾ ಪಡೆಗಳು ಪಾಕಿಸ್ತಾನ ಪ್ರಾಯೋಜಿತ ಉಗ್ರರನ್ನು ಹತ್ಯೆ ಮಾಡಿರುವ ಬೆನ್ನಲ್ಲೇ ಸೇನಾ ಮುಖ್ಯಸ್ಥ ಈ ಭೇಟಿ ನೀಡಿದ್ದಾರೆ.
ಕಾಶ್ಮೀರವು ವಿವಾದಿತ ಪ್ರದೇಶವಾಗಿದೆ. ಆರ್ಟಿಕಲ್ 370 ಹಿಂತೆಗೆದುಕೊಳ್ಳುವ ಮೂಲಕ ಭಾರತವು ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸಿದೆ. ಆ ಮೂಲಕ ಕಾನೂನಾತ್ಮಕವಾಗಿ ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಭೂಭಾಗ ಎಂದು ಸಾಧಿಸುತ್ತಿದೆ ಎಂದರು.