ಕಾಬೂಲ್: ಕಳೆದ ನಾಲ್ಕು ದಿನಗಳಲ್ಲಿ ಅಫ್ಘಾನ್ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ 950ಕ್ಕೂ ಹೆಚ್ಚು ತಾಲಿಬಾನ್ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಮತ್ತು 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿದೆ. ಅಫ್ಘಾನಿಸ್ತಾನದ ಹೆಚ್ಚಿನ ಪ್ರಮುಖ ಪ್ರಾಂತ್ಯಗಳ ಮೇಲೆ ಹಿಡಿತ ಸಾಧಿಸಲು ಅಫ್ಘಾನ್ ಮಿಲಿಟರಿ ಮತ್ತು ನಾಗರಿಕರ ವಿರುದ್ಧ ಭಯೋತ್ಪಾದಕ ಗುಂಪು ತನ್ನ ಹಿಂಸಾತ್ಮಕ ದಾಳಿಯನ್ನು ಮುಂದುವರಿಸಿತ್ತು. ಈ ಸಂದರ್ಭದಲ್ಲಿ ಇಲ್ಲಿನ ಸೇನೆಯು ಕಾರ್ಯಾಚರಣೆ ಕೈಗೊಂಡಿದೆ.
ಅಫ್ಘಾನ್ ಪಡೆಗಳು ಮತ್ತು ತಾಲಿಬಾನ್ ನಡುವೆ 20ಕ್ಕೂ ಹೆಚ್ಚು ಪ್ರಾಂತ್ಯಗಳು ಮತ್ತು 9 ನಗರಗಳಲ್ಲಿ ಘರ್ಷಣೆಗಳು ನಡೆಯುತ್ತಿವೆ. ಈ ಮಧ್ಯೆ ಅಫ್ಘಾನ್ ಪಡೆಗಳು ಕಳೆದ 12 ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿ ಪರ್ವಾನ್‌ನ ಸೊರ್ಖ್-ಎ-ಪಾರ್ಸಾ ಜಿಲ್ಲೆ ಮತ್ತು ಘಜ್ನಿಯ ಮೇಲ್‌ಸ್ತಾನ್ ಜಿಲ್ಲೆಯ ಮೇಲೆ ಹಿಡಿತ ಸಾಧಿಸಿವೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ. ಆದರೆ, ನಿಮ್ರೋಜ್‌ನ ಚಖನ್‌ಸೂರ್ ಜಿಲ್ಲೆಯ ಕೇಂದ್ರವು ಮತ್ತೊಮ್ಮೆ ತಾಲಿಬಾನ್ ಕೈಸೇರಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನು ಓದಿ: ಶೋಪಿಯಾನ್ನಲ್ಲಿ ಸೇನಾ ಕಾರ್ಯಾಚರಣೆ: LET ಕಮಾಂಡರ್ ಸೇರಿ ಇಬ್ಬರು ಹತ