ಕರ್ನಾಟಕ

karnataka

ETV Bharat / international

ಇದೇನು ರೈಲೋ.. ವಿಮಾನವೋ: ಆಫ್ಘನ್​ ಪ್ರಜೆಗಳ ಸಂಕಷ್ಟ ನೋಡಿ

ತಾಲಿಬಾನ್​ ಪಡೆಗಳಿಗೆ ಹೆದರಿ ಆಫ್ಘನ್​ ಪ್ರಜೆಗಳು ದೇಶ ತೊರೆಯುತ್ತಿದ್ದು, ರೈಲಿನಲ್ಲಿ ಪ್ರಯಾಣಿಸುವಂತೆ ವಿಮಾನದಲ್ಲಿ 600 ಕ್ಕೂ ಅಧಿಕ ಮಂದಿ ಪ್ರಯಾಣಿಸಿದ್ದಾರೆ.

By

Published : Aug 17, 2021, 4:09 PM IST

ಇದೇನು ರೈಲೋ.. ವಿಮಾನವೋ
ಇದೇನು ರೈಲೋ.. ವಿಮಾನವೋ

ಈ ಮೇಲಿನ ಫೋಟೋ ನೋಡಿದ್ರೆ, ಅರೇ.. ಇದೇನಿದು ರೈಲಿನ ಬೋಗಿಯೊಂದರಲ್ಲಿ ಇಷ್ಟೊಂದು ಜನರು ಪ್ರಯಾಣಿಸುತ್ತಿದ್ದಾರಲ್ಲ ಅಂತಾ ನಿಮಗೆ ಅನ್ನಿಸಬಹುದು. ಆದ್ರೆ, ಇದು ರೈಲಲ್ಲ, ಅಮೆರಿಕದ ವಿಮಾನ. ಇದೇನಿದು ವಿಮಾನ ಅಂತಿದ್ದಾರೆ, ನೋಡಿದ್ರೆ, ಪ್ಯಾಸೆಂಜರ್​ ರೈಲಿಗಿಂತ ಕಡೆಯಾಗಿದೆಯಲ್ಲ ಅಂತಾ ಅಂದುಕೊಳ್ಳುತ್ತಿದ್ದೀರಾ. ಈ ದೃಶ್ಯ ಆಫ್ಘನ್ನರ ಸಂಕಷ್ಟಕ್ಕೆ ಹಿಡಿದ ಕೈಗನ್ನಡಿ.

ವಿಮಾನದಲ್ಲಿ ಆಫ್ಘನ್​ ಪ್ರಜೆಗಳ ಜನಜಂಗುಳಿ

ಹೌದು, ಕಾಬೂಲ್​​ಅನ್ನು ತಾಲಿಬಾನ್​ ವಶಕ್ಕೆ ಪಡೆಯುತ್ತಿದ್ದಂತೆಯೇ, ಅಲ್ಲಿನ ಜನತೆ ಜೀವಭಯದಿಂದ ವಿದೇಶಗಳಿಗೆ ತೆರಳುತ್ತಿದ್ದಾರೆ. ನಿನ್ನೆ ಕಾಬೂಲ್​ನಿಂದ ಅಮೆರಿಕಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಜನರು ಕಿಕ್ಕಿರಿದು ತುಂಬಿದ್ದರು. ಅದೆಷ್ಟೋ ಜನ ವಿಮಾನಗಳ ರೆಕ್ಕೆಯ ಮೇಲೆಲ್ಲಾ ಕುಳಿತು ಪ್ರಯಾಣಿಸುತ್ತಿದ್ದರು. ಒಂದು ವಿಮಾನದಲ್ಲಿ 640 ಕ್ಕೂ ಹೆಚ್ಚು ಜನರು ಪ್ರಯಾಣ ಬೆಳೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಮಾನದಲ್ಲಿ ಕಿಕ್ಕಿರಿದು ತುಂಬಿರುವ ಜನತೆ

‘ತಾಲಿಬಾನ್​ನ ಅರಾಜಕತೆ ಆಡಳಿತದಿಂದಾಗಿ ಪುನಃ ಕರಾಳ ದಿನಗಳು ಸೃಷ್ಟಿಯಾಗಲಿವೆ ಎಂದು ಹೆದರಿ ಸಾವಿರಾರು ಆಫ್ಘನ್ನರು ದೇಶ ತೊರೆಯುತ್ತಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜನರು ಜಮಾವಣೆಗೊಂಡಿದ್ದು, ಇನ್ನೂ ಅನೇಕರು ಏರ್ಪೋರ್ಟ್ ಪ್ರವೇಶಿಸಲು ಹರಸಾಹಸ ಪಡುತ್ತಿದ್ದಾರೆ. ವಿಮಾನಗಳನ್ನೇರಲು ಜನರು ರನ್​ವೇನಲ್ಲಿ ಓಡುತ್ತಿರುವ ದೃಶ್ಯಗಳು ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ವಿಮಾನದ ಕಿಟಕಿ ಮೇಲೆ ಕುಳಿತಿರುವ ಜನತೆ

ವಿಮಾನದ ಫೋಟೋಗಳನ್ನು ಅಮೆರಿಕನ್​ ಮಾಧ್ಯಮ ಕಂಪನಿ ಡಿಫೆನ್ಸ್​ ಒನ್​ ತಮ್ಮ ಟ್ವಿಟ್ಟರ್​​ನಲ್ಲಿ ಪೋಸ್ಟ್ ಮಾಡಿದೆ. ಸದ್ಯ ವಿಮಾನವು ಕತಾರ್​ನಲ್ಲಿ ಲ್ಯಾಂಡ್​ ಆಗಿದೆ. ಅಮೆರಿಕದ ಬಹುತೇಕ ವಿಮಾನಗಳಲ್ಲಿ ಇದೇ ರೀತಿಯ ದೃಶ್ಯಗಳು ಕಂಡು ಬಂದಿವೆ.

ABOUT THE AUTHOR

...view details