ಕ್ಯುಷು(ಜಪಾನ್):ಭಾರಿ ಮಳೆಗೆ ಜಪಾನ್ ತತ್ತರಿಸಿದೆ. ನೈರುತ್ಯ ಜಪಾನ್ನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥವಾಗಿದ್ದು, ಸುಮಾರು 6,70,000 ಜನರು ತಮ್ಮ ಸ್ಥಳಾಂತರಕ್ಕೆ ಸರ್ಕಾರದ ಮೊರೆ ಹೋಗಿದ್ದಾರೆ.
ನಾಗರಿಕರ ಮನವಿಯಂತೆ ಸರ್ಕಾರವು ಉತ್ತರ ಕ್ಯುಷು ದ್ವೀಪ ಪ್ರದೇಶದ ಸಾಗ, ಫುಕುಯೋಕಾ ಮತ್ತು ನಾಗಸಾಕಿ ಪ್ರಾಂತ್ಯದ ಜನರ ಸ್ಥಳಾಂತರಕ್ಕೆ ಆದೇಶ ನೀಡಿದೆ.
ಸಾಗಾ ಪ್ರಾಂತ್ಯದಲ್ಲಿ ಮಳೆಯಿಂದ ಭಾರಿ ಹಾನಿ ಸಂಭವಿಸಿದ್ದು, ಇಲ್ಲಿನ ಮುಖ್ಯ ರೈಲ್ವೆ ನಿಲ್ದಾಣ ಜಲಾವೃತಗೊಂಡಿದೆ. ಅಲ್ಲಲ್ಲಿ ಭೂಕುಸಿತ ಸಂಭವಿಸಿದ್ದು, ಹಲವು ವಾಹನಗಳು ನೀರಿನಲ್ಲಿ ಕೊಚ್ಚಿಹೋಗಿವೆ.
ಈ ವರೆಗೆ ಈ ಪ್ರದೇಶದಲ್ಲಿ ಮೂವರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದ್ದು, ಓಬ್ಬರು ನಾಪತ್ತೆಯಾಗಿದ್ದಾರೆ. ಜಪಾನ್ ಹವಾಮಾನ ಸಂಸ್ಥೆ ಪಶ್ಚಿಮದಿಂದ ಉತ್ತರ ಜಪಾನ್‌ವರೆಗೆ ಹಲವು ಪ್ರದೇಶಗಳಲ್ಲಿ ಶುಕ್ರವಾರದವರೆಗೆ ವ್ಯಾಪಕ ಮಳೆಯಾಗುವ ಮುನ್ಸೂಚನೆ ನೀಡಿದೆ.