ಕರ್ನಾಟಕ

karnataka

ETV Bharat / international

6 ತಿಂಗಳಲ್ಲಿ 5 ಲಕ್ಷಕ್ಕೂ ಅಧಿಕ ಆಫ್ಘಾನ್ ನಿರಾಶ್ರಿತರು ವಾಪಸ್ ​: ತಾಲಿಬಾನ್ - ಅಫ್ಘಾನ್ ನಿರಾಶ್ರಿತರು ವಾಪಸ್

ವಿದೇಶದಲ್ಲಿ ಬಂಧನದಲ್ಲಿರುವ ಆಫ್ಘನ್ನರ ಬಿಡುಗಡೆಗೆ ಅನುಕೂಲವಾಗುವಂತೆ ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿವೆ ಎಂದು ನಿರಾಶ್ರಿತರ ಮತ್ತು ವಾಪಸಾತಿ ಸಚಿವಾಲಯದ (MRR) ಉಪ ಮಂತ್ರಿ ಮೊಹಮ್ಮದ್ ಅರ್ಸಲಾ ಖರೋಟೈ ತಿಳಿಸಿದ್ದಾರೆ..

refugees
ಪ್ರಾತಿನಿಧಿಕ ಚಿತ್ರ

By

Published : Mar 11, 2022, 1:09 PM IST

ಕಾಬೂಲ್ :ಕಳೆದ 6 ತಿಂಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಆಫ್ಘನ್ ನಿರಾಶ್ರಿತರು ದೇಶಕ್ಕೆ ಮರಳಿದ್ದಾರೆ ಎಂದು ತಾಲಿಬಾನ್ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಟೋರ್ಕಮ್ ಗಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ನಿರಾಶ್ರಿತರ ಮತ್ತು ವಾಪಸಾತಿ ಸಚಿವಾಲಯದ (ಎಂಆರ್‌ಆರ್) ಉಪ ಸಚಿವ ಮೊಹಮ್ಮದ್ ಅರ್ಸಲಾ ಖರೋಟೈ, ವಿದೇಶದಲ್ಲಿ ಬಂಧನದಲ್ಲಿರುವ ಆಫ್ಘನ್ನರ ಬಿಡುಗಡೆಗೆ ಅನುಕೂಲವಾಗುವಂತೆ ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿವೆ ಎಂದರು.

ಸುಮಾರು 5,50,000 ಜನರು ನಮ್ಮೊಂದಿಗೆ ನೋಂದಾಯಿಸಿಕೊಂಡಿದ್ದಾರೆ. ಆದರೆ, ಅವರಲ್ಲಿ ಕೆಲವರು ನೋಂದಾಯಿಸದೆ ಇರುವುದರಿಂದ ಸಂಖ್ಯೆ ಹೆಚ್ಚಿರಬಹುದು ಎಂದು ಅವರು ಹೇಳಿದರು.

ಆಫ್ಘಾನಿಸ್ತಾನದ ನಂಗರ್‌ಹಾರ್ ಪ್ರಾಂತ್ಯವನ್ನು ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದೊಂದಿಗೆ ಸಂಪರ್ಕಿಸುವ ಗಡಿಯಲ್ಲಿ ಸಮಸ್ಯೆಗಳ ಬಗ್ಗೆ ನಾಗರಿಕರು ದೂರು ನೀಡಿದ ನಂತರ ಸಚಿವ ಮೊಹಮ್ಮದ್ ಅರ್ಸಲಾ ಖರೋಟೈ ಈ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ:ಸಮಾಧಿಯಂತಾದ ಉಕ್ರೇನ್​ಗೆ ಚೀನಾ ಸಹಾಯ ಮಾಡಲು ಸಿದ್ಧ​ : ಪ್ರಧಾನಿ ಲಿ ಕೆಕಿಯಾಂಗ್‌

ABOUT THE AUTHOR

...view details