ಕರ್ನಾಟಕ

karnataka

ETV Bharat / international

ಕೋವಿಡ್ ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ಒಲಿಂಪಿಕ್​ ಜ್ಯೋತಿಗೆ ನಿರ್ಬಂಧ?

ಒಲಿಂಪಿಕ್ ಅಂಗವಾಗಿ ಏಪ್ರಿಲ್​ 3ರಿಂದ ನಡೆಯಲಿರುವ ಕೆಲವೊಂದು ಕಾರ್ಯಕ್ರಮಗಳನ್ನು ರದ್ದು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಟೋಕಿಯೋ ಒಲಿಂಪಿಕ್-2020ರ ಅಧ್ಯಕ್ಷ ಸಿಯಾಕೋ ಹಶಿಮೋಟೋ ಸ್ಪಷ್ಟನೆ ನೀಡಿದ್ದಾರೆ.

Olympic torch relay may be cancelled in areas with high Covid-19 cases, says Hashimoto
ಕೋವಿಡ್ ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ಒಲಿಂಪಿಕ್​ ಜ್ಯೋತಿಗೆ ನಿರ್ಬಂಧ..?

By

Published : Apr 2, 2021, 6:27 PM IST

ಟೋಕಿಯೋ(ಜಪಾನ್): ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಿರುವ ಪ್ರದೇಶಗಳಲ್ಲಿ ಒಲಿಂಪಿಕ್ ಜ್ಯೋತಿ ತೆರಳುವುದನ್ನು ನಿರ್ಬಂಧಿಸಲು ಒಲಿಂಪಿಕ್ ಕ್ರೀಡಾಕೂಟ ಆಯೋಜನಾ ಸಮಿತಿ ನಿರ್ಧರಿಸುವ ಸಾಧ್ಯತೆಯಿದೆ ಎಂದು ಟೋಕಿಯೋ ಒಲಿಂಪಿಕ್-2020ರ ಅಧ್ಯಕ್ಷ ಸಿಯಾಕೋ ಹಶಿಮೋಟೋ ತಿಳಿಸಿದೆ.

ಕ್ರೀಡಾಜ್ಯೋತಿಯೊಂದಿಗೆ ತೆರಳಲು ತಂಡವೊಂದು ನಿರಾಕರಿಸಿದೆ. ಸೋಂಕಿತರು ಹೆಚ್ಚಿರುವ ಪ್ರದೇಶಗಳು ದಿನದಿಂದ ದಿನಕ್ಕೆ ಬದಲಾಗುತ್ತವೆ. ಆದಷ್ಟು ಬೇಗ ನಾವು ನಿರ್ಧಾರ ತೆಗೆದುಕೊಳ್ಳಬೇಕಿದೆ. ಕೊನೆಯ ಕ್ಷಣದವರೆಗೆ ಕ್ರೀಡಾ ಜ್ಯೋತಿ ಹೊರಡುವ ಪ್ರದೇಶಗಳನ್ನು ನಿರ್ಧರಿಸುವ ಆಯ್ಕೆ ಸಮಿತಿಗಿದ್ದು, ಏನಾದರೂ ಆಗಬಹುದು ಎಂದು ಹಶಿಮೋಟೋ ಹೇಳಿದ್ದಾರೆ.

ಇದನ್ನೂ ಓದಿ:ದೆಹಲಿಯಲ್ಲಿ ಲಾಕ್​ಡೌನ್​ ಇಲ್ಲ: ಖಚಿತಪಡಿಸಿದ ಮುಖ್ಯಮಂತ್ರಿ ಕೇಜ್ರಿವಾಲ್

ಏಪ್ರಿಲ್ ಅಂತ್ಯದ ವೇಳೆಗೆ ಒಲಿಂಪಿಕ್​ಗೆ ಜಪಾನ್​​​ನಿಂದ ಎಷ್ಟು ಮಂದಿ ಬರಬಹುದು ಎಂಬ ವಿಚಾರವನ್ನು ಅಂತಿಮವಾಗಿ ನಿರ್ಧರಿಸಲು ಕಮಿಟಿ ಚಿಂತನೆ ನಡೆಸಲಿದೆೆ.

ಏಪ್ರಿಲ್​ 3ರಿಂದ ನಡೆಯಲಿರುವ ಕೆಲವೊಂದು ಕಾರ್ಯಕ್ರಮಗಳನ್ನು ರದ್ದು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಹಶಿಮೋಟೋ ಸ್ಪಷ್ಟನೆ ನೀಡಿದ್ದು, ಅಥ್ಲೀಟ್​​ಗಳು ಸುರಕ್ಷಿತ ಎಂದು ಭಾವಿಸಿದರೆ ಮಾತ್ರ ಕಾರ್ಯಕ್ರಮಗಳನ್ನು ಆಯೋಜಿಸಲು ಬದ್ಧರಾಗಿದ್ದೇವೆ ಎಂದಿದ್ದಾರೆ.

ನಮಗೆ ಹೆಚ್ಚಿನ ಕಾಲಾವಕಾಶ ಇಲ್ಲ. ಆದಷ್ಟು ಬೇಗ ನಿರ್ಧಾರ ತೆಗೆದುಕೊಳ್ಳಬೇಕಿದೆ. ವೀಕ್ಷಕರ ಸಂಖ್ಯೆ ವೈರಸ್ ಹಾವಳಿ ಯಾವ ಪ್ರಮಾಣದಲ್ಲಿರುತ್ತದೆ ಎಂಬುದನ್ನು ಅವಲಂಬಿಸಿರುತ್ತದೆ ಎಂದು ಮಾಹಿತಿ ಹಶಿಮೋಟೋ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details