ಕರ್ನಾಟಕ

karnataka

ETV Bharat / international

ಸಂಸತ್ತಿನ ಕೆಳಮನೆ ಸಭೆ ಕರೆಯಲು ನಿರ್ಧರಿಸಿದ ಒಲಿ ಬಣ - ಸ್ಥಾಯಿ ಸಮಿತಿ ಸಭೆ

275 ಸದಸ್ಯರ ಸದನವನ್ನು ವಿಸರ್ಜಿಸಲು ಮತ್ತು ಚುನಾವಣೆಗೆ ಕರೆ ನೀಡುವ ಸರ್ಕಾರದ ನಿರ್ಧಾರವನ್ನು ನೇಪಾಳದ ಉನ್ನತ ನ್ಯಾಯಾಲಯ ವಜಾಗೊಳಿಸಿತ್ತು. ಒಲಿ ಬಣದ ಮುಂದಿನ ಸ್ಥಾಯಿ ಸಮಿತಿ ಸಭೆ ನಾಳೆ ನಡೆಯಲಿದೆ.

Oli-faction decides to summon parliament meeting
ಒಲಿ ಬಣದ ವಕ್ತಾರ ಪ್ರದೀಪ್ ಗಾಯವಾಲಿ

By

Published : Feb 24, 2021, 7:40 PM IST

ಕಠ್ಮಂಡು:ನೇಪಾಳದ ಪ್ರಧಾನಿ ಕೆಪಿ ಒಲಿ ನೇತೃತ್ವದಲ್ಲಿ ಬುಧವಾರ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ, ಸುಪ್ರೀಂಕೋರ್ಟ್​ನ ಆದೇಶದಂತೆ ಸಂಸತ್ತಿನ ಕೆಳಮನೆಯ ಸಭೆಯನ್ನು ಕರೆಯಲು ನಿರ್ಧರಿಸಲಾಗಿದೆ.

ಪ್ರಧಾನ ಮಂತ್ರಿಗಳ ಅಧಿಕೃತ ನಿವಾಸ - ಬಾಲುವತಾರ್ನನಲ್ಲಿ ಇಂದು ನಡೆದ ಸಭೆಯಲ್ಲಿ ಈ ನಿರ್ಧಾರದ ಬಗ್ಗೆ ಒಲಿ ಬಣದ ವಕ್ತಾರ ಪ್ರದೀಪ್ ಗಾಯವಾಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಓದಿ:ಮಂಗಳನ ಕಕ್ಷೆ ಸೇರಿದ ಚೀನಾದ ಟಿಯಾನ್ವೆನ್-1 ಬಾಹ್ಯಾಕಾಶ ನೌಕೆ

"ನ್ಯಾಯಾಲಯ ನಿಗದಿಪಡಿಸಿದ ಸಮಯದಲ್ಲಿ ಸಭೆ ಕರೆಯಲು ನಾವು ನಿರ್ಧರಿಸಿದ್ದೇವೆ. ಸಭೆ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು" ಎಂದು ಗಯಾವಲಿ ಹೇಳಿದರು.

ಇತರ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಪ್ರಧಾನಿ ಒಲಿ ಅವರು ಈ ಹುದ್ದೆಗೆ ರಾಜೀನಾಮೆ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಗಯಾವಲಿ ಹೇಳಿದರು.

ABOUT THE AUTHOR

...view details