ಇಸ್ಲಾಮಾಬಾದ್(ಪಾಕಿಸ್ತಾನ): ಪಾಕಿಸ್ತಾನದ ಶಾಸಕಿಯೋರ್ವರ (Pakistani woman MLA) ಅಶ್ಲೀಲ ವಿಡಿಯೋ ಎನ್ನಲಾಗಿರುವ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ. ಅದೇ ವಿಚಾರವಾಗಿ ಶಾಸಕಿ ಸಾನಿಯಾ ಆಶಿಕ್ (MLA Sania Ashiq) ಇದೀಗ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಪಾಕಿಸ್ತಾನ ಮುಸ್ಲಿಂ ಲೀಗ್‌ನ (Pakistan Muslim League) ಶಾಸಕಿ ಸಾನಿಯಾ ಆಶಿಕ್ ಈ ಅಶ್ಲೀಲ ವಿಡಿಯೋದಲ್ಲಿದ್ದಾರೆ ಎನ್ನಲಾಗಿದ್ದು, ಆದರೆ ಇದನ್ನು ಶಾಸಕಿ ಖುದ್ದಾಗಿ ಅಲ್ಲಗಳೆದಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸೈಬರ್ ಕ್ರೈಂ ಠಾಣೆ ಮೆಟ್ಟಿಲೇರಿ ದೂರು ದಾಖಲು ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯ ಬಂಧನ ಮಾಡುವಲ್ಲಿ ಲಾಹೋರ್ ಪೊಲೀಸರು ಯಶಸ್ವಿಯಾಗಿದ್ದಾರೆ.