ಕರ್ನಾಟಕ

karnataka

ETV Bharat / international

ನಾನು ಭ್ರಷ್ಟನಲ್ಲ.. ಸೇನೆಗೆ ಹೆದರಲ್ಲ: ಪಾಕ್ ಪ್ರಧಾನಿ ಇಮ್ರಾನ್ ಖಾನ್ - ಇಮ್ರಾನ್ ಖಾನ್ ಲೇಟೆಸ್ಟ್ ನ್ಯೂಸ್

ನಾನು ಭ್ರಷ್ಟನಲ್ಲ ಎಂದು ತಮ್ಮ ದೇಶದ ಮಿಲಿಟರಿಗೆ ಚೆನ್ನಾಗಿ ತಿಳಿದಿದೆ ಹೀಗಾಗಿ, ಪಾಕಿಸ್ತಾನ ಸೇನೆಗೆ ಹೆದರುವ ಅವಶ್ಯಕತೆ ಇಲ್ಲ ಎಂದು ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

Not afraid of Pakistan Army: Imran Khan
ಪಾಕ್ ಸೇನೆಗೆ ಹೆದರುವುದಿಲ್ಲ

By

Published : Feb 16, 2020, 7:15 PM IST

ಇಸ್ಲಮಾಬಾದ್:ನಾನು ಭ್ರಷ್ಟನಲ್ಲ ಎಂದು ತಮ್ಮ ದೇಶದ ಮಿಲಿಟರಿಗೆ ಚೆನ್ನಾಗಿ ತಿಳಿದಿದೆ ಹೀಗಾಗಿ, ಪಾಕಿಸ್ತಾನ ಸೇನೆಗೆ ಹೆದರುವ ಅವಶ್ಯಕತೆ ಇಲ್ಲ ಎಂದು ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

'ಭ್ರಷ್ಟಾಚಾರದಲ್ಲಿ ತೊಡಗಿರುವವರಿಗೆ ಪಾಕಿಸ್ತಾನ ಮಿಲಿಟರಿಯ ಭಯವಿತ್ತು, ಆದರೆ ನಾನು ಭ್ರಷ್ಟನಲ್ಲ. ರಾಜಕೀಯದ ಮೂಲಕ ಹಣ ಸಂಪಾದಿಸುತ್ತಿಲ್ಲ' ಎಂದು ಖಾನ್ ಹೇಳಿದ್ದಾರೆ.

ಈ ಹಿಂದೆ ಇದ್ದ ನವಾಜ್ ಷರೀಫ್ ಮತ್ತು ಆಸಿಫ್ ಜರ್ದಾರಿ ಅವರ ಸರ್ಕಾರಗಳ ಭ್ರಷ್ಟಾಚಾರದ ಬಗ್ಗೆ ಗುಪ್ತಚರ ಸಂಸ್ಥೆಗಳಿಗೆ ಸಂಪೂರ್ಣವಾಗಿ ತಿಳಿದಿದೆ. ಸರ್ಕಾರದ ವಿರುದ್ಧ ಪಿತೂರಿ ನಡೆಸಿದ್ದಕ್ಕಾಗಿ ಜೆಯುಐ-ಎಫ್ ಮುಖ್ಯಸ್ಥ ಮೌಲಾನಾ ಫಜ್ಲೂರ್ ರೆಹಮಾನ್ ವಿರುದ್ಧ ಸಂವಿಧಾನದ 6ನೇ ಪರಿಚ್ಛೇದದ ಅಡಿಯಲ್ಲಿ ಹೆಚ್ಚಿನ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಖಾನ್ ಹೇಳಿದ್ದಾರೆ.

ABOUT THE AUTHOR

...view details