ಕರ್ನಾಟಕ

karnataka

ETV Bharat / international

ಇಂದಿನಿಂದ 10 ದಿನಗಳವರೆಗೆ ಉತ್ತರ ಕೊರಿಯಾ ಜನರು ನಗುವಂತಿಲ್ಲ.. ವಿಚಿತ್ರ ನಿರ್ಬಂಧಕ್ಕೆ ಕಾರಣ ಗೊತ್ತಾ? - ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್

ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಅವರ ತಂದೆ ಹಾಗೂ ಮಾಜಿ ಸರ್ವೋಚ್ಚ ನಾಯಕ ದಿ.ಕಿಮ್ ಜಾಂಗ್ ಇಲ್ ಅವರ 10ನೇ ಪುಣ್ಯತಿಥಿ ಅಂಗವಾಗಿ ದೇಶದಲ್ಲಿ ಚಿತ್ರವಿಚಿತ್ರ ನಿರ್ಬಂಧಗಳನ್ನು ಹೇರಲಾಗಿದೆ.

North Koreans banned from laughing
ಉತ್ತರ ಕೊರಿಯಾ

By

Published : Dec 17, 2021, 4:01 PM IST

ಪ್ಯೊಂಗ್ಯಾಂಗ್ (ಉತ್ತರ ಕೊರಿಯಾ): ಮಾಜಿ ಸರ್ವೋಚ್ಚ ನಾಯಕ ದಿ.ಕಿಮ್ ಜಾಂಗ್ ಇಲ್ ಅವರ 10ನೇ ಪುಣ್ಯತಿಥಿ ನಿಮಿತ್ತ ಉತ್ತರ ಕೊರಿಯಾದ ನಾಗರಿಕರಿಗೆ ಇಂದಿನಿಂದ 10 ದಿನಗಳ ಕಾಲ ನಗುವುದು, ಯಾರಾದರು ಸತ್ತರೆ ಅಂತ್ಯಕ್ರಿಯೆ ಮಾಡುವುದನ್ನು ನಿಷೇಧಿಸಲಾಗಿದೆ.

ಕಿಮ್ ಜೊಂಗ್ ಇಲ್ ಅವರು ಉತ್ತರ ಕೊರಿಯಾವನ್ನು 1994 ರಿಂದ ಡಿಸೆಂಬರ್​ 17, 2011ರಂದು ಸಾಯುವವರೆಗೂ ಆಳಿದ್ದರು. ಬಳೀಕ ಅವರ ಮೂರನೇ ಮತ್ತು ಕಿರಿಯ ಮಗ ನಾಯಕ ಕಿಮ್ ಜಾಂಗ್ ಉನ್ ಉತ್ತರಾಧಿಕಾರಿಯಾಗಿ ದೇಶವನ್ನು ಆಳುತ್ತಿದ್ದಾರೆ. ಪ್ರತಿವರ್ಷ ಕೂಡ ಕಿಮ್ ಜೊಂಗ್ ಇಲ್ ಅವರ ಪುಣ್ಯತಿಥಿ ಅಂಗವಾಗಿ 10 ದಿನಗಳ ಕಾಲ ಶೋಕಾಚರಣೆ ಆಚರಿಸಲಾಗುತ್ತದೆ. ಆದರೆ, ಈ ಬಾರಿ 10ನೇ ಪುಣ್ಯತಿಥಿ ಎಂದು ವಿಚಿತ್ರ ನಿರ್ಬಂಧಗಳನ್ನು ಜನರ ಮೇಲೆ ಹೇರಿ ಆಚರಿಸಲಾಗುತ್ತಿದೆ.

ಮಾಜಿ ಸರ್ವೋಚ್ಚ ನಾಯಕ ದಿ. ಕಿಮ್ ಜಾಂಗ್ ಇಲ್

ವಿಚಿತ್ರ ನಿರ್ಬಂಧಗಳಿವು..

10 ದಿನಗಳ ಶೋಕಾಚರಣೆ ಅವಧಿಯಲ್ಲಿ ನಗುವುದು, ಮದ್ಯಪಾನ ಮಾಡುವುದು, ದಿನಸಿ ವಸ್ತುಗಳನ್ನು ಖರೀದಿಸುವುದು, ಜನ್ಮದಿನ ಆಚರಿಸಿಕೊಳ್ಳುವುದು, ವಿರಾಮ ಚಟುವಟಿಕೆಗಳಲ್ಲಿ ತೊಡಗುವುದನ್ನು ನಿರ್ಬಂಧಿಸಲಾಗಿದೆ. ಇದು ಇಷ್ಟಕ್ಕೇ ಮುಗಿದಿಲ್ಲ. ಯಾರಾದರೂ ಮೃತಪಟ್ಟರೂ ಕೂಡ ಜನರು ಜೋರಾಗಿ ಅಳುವಂತಿಲ್ಲ ಹಾಗೂ ಅವರ ಅಂತ್ಯಕ್ರಿಯೆ ಮಾಡುವಂತಿಲ್ಲ. ಶೋಕಾಚರಣೆ ಮುಗಿದ ಬಳಿಕವೇ ಅಂತಿಮ ವಿಧಿವಿಧಾನಗಳನ್ನು ಮಾಡಬೇಕಿದೆ. ಒಂದು ವೇಳೆ ಇದನ್ನು ಉಲ್ಲಂಘಿಸಿದವರು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಉತ್ತರ ಕೊರಿಯಾ ಸರ್ಕಾರ ಸೂಚಿಸಿದೆ.

ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್

ನಿಯಮ ಉಲ್ಲಂಘಿಸಿದವರು ಹಿಂದಿರುಗಿ ಬರಲೇ ಇಲ್ಲ..

ಈ ಹಿಂದೆ ಶೋಕಾಚರಣೆ ಸಮಯದಲ್ಲಿ ಮದ್ಯಪಾನ ಮಾಡಿ ಸಿಕ್ಕಿಬಿದ್ದ ಅನೇಕರನ್ನು ಬಂಧಿಸಿರುವ ಉದಾಹರಣೆಗಳಿವೆ. ಆದರೆ, ಅವರು ಮತ್ತೆ ಅವರು ಹಿಂದಿರುಗಿ ಬಂದಿದ್ದನ್ನು ನಾವು ನೋಡಿಲ್ಲ ಎಂದು ಹೆಸರು ಹೇಳಲಿಚ್ಛಿಸದ ನಾಗರಿಕರು ತಿಳಿಸಿದ್ದಾರೆ.

ABOUT THE AUTHOR

...view details