ಕರ್ನಾಟಕ

karnataka

ETV Bharat / international

ಹಠ ಬಿಡದ ಕಿಮ್​​.. ಮತ್ತೆರೆಡು ಕ್ಷಿಪಣಿ ಪರೀಕ್ಷೆ ನಡೆಸಿದ ಉತ್ತರ ಕೊರಿಯಾ - ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿದ ಉತ್ತರ ಕೊರಿಯಾ

ಉತ್ತರ ಕೊರಿಯಾ ಇತ್ತೀಚೆಗೆ ಎರಡು ಖಂಡಾಂತರ ಕ್ಷಿಪಣಿ (ICBM)ಗಳ ಪರೀಕ್ಷಾರ್ಥ ಪ್ರಯೋಗ ನಡೆಸಿದೆ ಎಂದು ಅಮೆರಿಕ ಹೇಳಿದೆ. ಅನಗತ್ಯವಾಗಿ ಉದ್ವಿಗ್ನತೆಯನ್ನು ಹೆಚ್ಚಿಸುವುದರೊಂದಿಗೆ ಪ್ರದೇಶದ ಭದ್ರತಾ ವ್ಯವಸ್ಥೆಯನ್ನು ಅಸ್ಥಿರಗೊಳಿಸುವ ಅಪಾಯವಿದೆ ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

By

Published : Mar 11, 2022, 7:58 AM IST

ವಾಷಿಂಗ್ಟನ್(ಅಮೆರಿಕ) : ಉತ್ತರ ಕೊರಿಯಾ ಇತ್ತೀಚೆಗೆ ಎರಡು ಖಂಡಾಂತರ ಕ್ಷಿಪಣಿ (ICBM)ಗಳ ಪರೀಕ್ಷಾರ್ಥ ಪ್ರಯೋಗ ನಡೆಸಿದೆ ಎಂದು ಅಮೆರಿಕ ಹೇಳಿದೆ. ಫೆಬ್ರವರಿ 26 ಮತ್ತು ಮಾರ್ಚ್ 4 ರಂದು ನಡೆಸಲಾದ ಉಡಾವಣೆ ವಿಚಕ್ಷಣ ಉಪಗ್ರಹವನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಿವೆ ಎಂದು ಪ್ಯೊಂಗ್ಯಾಂಗ್ ಹೇಳಿದೆ.

ಆದರೆ, ಅಮೆರಿಕದ ಈ ಕ್ಷಿಪಣಿ ಪರೀಕ್ಷೆಯನ್ನು ಬಲವಾಗಿ ಖಂಡಿಸುತ್ತದೆ. ಇದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳ ಉಲ್ಲಂಘನೆಯಾಗಿದೆ. ಅನಗತ್ಯವಾಗಿ ಉದ್ವಿಗ್ನತೆ ಹೆಚ್ಚಿಸುವುದರೊಂದಿಗೆ ಪ್ರದೇಶದ ಭದ್ರತಾ ವ್ಯವಸ್ಥೆ ಅಸ್ಥಿರಗೊಳಿಸುವ ಅಪಾಯವಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕ್ಷಿಪಣಿ ಪರೀಕ್ಷೆಗಳನ್ನು ಅಭಿವೃದ್ಧಿಪಡಿಸಲು ವಿದೇಶಿ ವಸ್ತುಗಳು ಮತ್ತು ತಂತ್ರಜ್ಞಾನ ಬಳಸಲಾಗಿದೆ. ಹಾಗಾಗಿ ಉತ್ತರ ಕೊರಿಯಾ ವಿರುದ್ಧ ಯುಎಸ್ ಮತ್ತಷ್ಟು ನಿರ್ಬಂಧಗಳನ್ನು ವಿಧಿಸಲಿದೆ ಎಂದು ಹೇಳಿದರು.

ಉತ್ತರ ಕೊರಿಯಾ ತನ್ನ ಕ್ಷಿಪಣಿ ಮತ್ತು ಪರಮಾಣು ಪರೀಕ್ಷೆಗೆ ಈಗಾಗಲೇ ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಎದುರಿಸುತ್ತಿದೆ. ಪ್ಯೊಂಗ್ಯಾಂಗ್ 2017 ರಿಂದ ಯಾವುದೇ ಪರಮಾಣು ಪರೀಕ್ಷೆಗಳನ್ನು ನಡೆಸಿಲ್ಲ. ಆದರೂ ಆಗಿನ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಯ ನಂತರ ಉತ್ತರ ಕೊರಿಯಾ ದೀರ್ಘ - ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಪರಮಾಣು ಪರೀಕ್ಷೆಗೆ ನಿಷೇಧ ವಿಧಿಸಿತು. ಆದರೆ, 2020ರಲ್ಲಿ ಕಿಮ್ ಅವರು ಈ ನಿಷೇಧಕ್ಕೆ ಬದ್ಧರಾಗಿಲ್ಲ ಎಂದು ಘೋಷಿಸಿದರು.

ಇದನ್ನೂ ಓದಿ:ಉತ್ತರ ಕೊರಿಯಾದಿಂದ ಮತ್ತೆ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆ : ದ.ಕೊರಿಯಾ ಸೇನೆ


ABOUT THE AUTHOR

...view details