ಸಿಯೋಲ್: ಉತ್ತರ ಕೊರಿಯಾ ಇಂದು ತನ್ನ ಪೂರ್ವ ಸಮುದ್ರದತ್ತ ಬ್ಯಾಲಿಸ್ಟಿಕ್ ನಂತೆ ಕಾಣುತ್ತಿದ್ದ ಕ್ಷಿಪಣಿಯೊಂದನ್ನು ಉಡಾಯಿಸಿದೆ ಎಂದು ಹೇಳಲಾಗುತ್ತಿದೆ. ಒಂದು ವಾರದಲ್ಲಿ ಎರಡನೇ ಬಾರಿ ಉತ್ತರ ಕೊರಿಯಾ ಶಸ್ತ್ರಾಸ್ತ್ರ ಕ್ಷಿಪಣಿ ಉಡಾವಣೆ ಮಾಡಿದೆ ಎಂದು ದಕ್ಷಿಣ ಕೊರಿಯಾ ಮತ್ತು ಜಪಾನ್ ಮಿಲಿಟರಿಗಳು ತಿಳಿಸಿವೆ.
ಜಲಾಂತರ್ಗಾಮಿಯಿಂದ ಕ್ಷಿಪಣಿ ಉಡಾಯಿಸುವ ತಂತ್ರಜ್ಞಾನದ ಪರೀಕ್ಷೆ ಹಿನ್ನೆಲೆಯಲ್ಲಿ ಕ್ಷಿಪಣಿ ಉಡಾಯಿಸಲಾಗುತ್ತಿದೆ. ಈ ಕ್ಷಿಪಣಿ ಉಡಾವಣೆ ಉತ್ತರ ಕೊರಿಯಾ ತನ್ನ ಮಿಲಿಟರಿ ಸಾಮರ್ಥ್ಯಗಳನ್ನು ಹೇಗೆ ವಿಸ್ತರಿಸುತ್ತಿದೆ ಎಂಬುದನ್ನು ತೋರಿಸುತ್ತಿದೆ.
ಇದನ್ನೂ ಓದಿ:ಚೀನಾದೊಂದಿಗಿನ ಗಡಿ ವಿವಾದದಲ್ಲಿ ಅಮೆರಿಕ ಭಾರತದ ಪರ ನಿಲ್ಲುತ್ತದೆ: ಶ್ವೇತಭವನ
ದಕ್ಷಿಣ ಕೊರಿಯಾದ ಜಂಟಿ ಚೀಫ್ಸ್ ಆಫ್ ಸ್ಟಾಫ್ ಮಾಹಿತಿ ನೀಡಿದ್ದು, ಇಂದು ಮುಂಜಾನೆ ಒಂದು ಕ್ಷಿಪಣಿಯನ್ನು ಉಡಾಯಿಸಲಾಗಿದೆ ಎಂದು ತಿಳಿಸಿದಿದ್ದಾರೆ. ಆದರೆ, ಅದು ಬ್ಯಾಲಿಸ್ಟಿಕ್ ಕ್ಷಿಪಣಿಯೇ ಅಥವಾ ಅದು ಎಷ್ಟು ದೂರ ಹಾರಿತು ಎಂಬುದನ್ನು ತಕ್ಷಣವೇ ಖಚಿತ ಮಾಹಿತಿ ನೀಡಿಲ್ಲ. ಉತ್ತರ ಕೊರಿಯಾದ ಈ ಶಸ್ತ್ರಾಸ್ತ್ರವು ಬಹುಶಃ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿರಬಹುದು ಎಂದು ಜಪಾನ್‌ನ ಪ್ರಧಾನ ಮಂತ್ರಿ ಕಚೇರಿ ಮತ್ತು ರಕ್ಷಣಾ ಸಚಿವಾಲಯ ಹೇಳಿದೆ. ಆದರೆ ಈ ಬಗ್ಗೆ ಖಚಿತ ಮಾಹಿತಿ ಇನ್ನೂ ಹೊರಹಾಕಿಲ್ಲ.