ಸಿಯೋಲ್: ಉತ್ತರ ಕೊರಿಯಾ ಇಂದು ಮುಂಜಾನೆ ಅಲ್ಪ - ಶ್ರೇಣಿಯ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ನಡೆಸಿದೆ. ತುರ್ತು ರಾಷ್ಟ್ರೀಯ ಭದ್ರತಾ ಮಂಡಳಿಯ ಸಭೆಯಲ್ಲಿ, ದಕ್ಷಿಣ ಕೊರಿಯಾ ಸರ್ಕಾರವು ಈ ಬಗ್ಗೆ ವಿಷಾದ ವ್ಯಕ್ತಪಡಿಸಿದೆ. ಉತ್ತರ ಕೊರಿಯಾದ ಪರ್ವತದ ಉತ್ತರ ಜಗಂಗ್ ಪ್ರಾಂತ್ಯದಿಂದ ಕ್ಷಿಪಣಿ ಉಡಾವಣೆಗೊಂಡಿದ್ದು, ಉತ್ತರ ಪೂರ್ವ ಸಮುದ್ರದ ಕಡೆಗೆ ಹಾರಿತು ಎಂದು ದಕ್ಷಿಣ ಕೊರಿಯಾದ ಸೇನೆ ಹೇಳಿತ್ತು.
DPRKಯ ಕ್ಷಿಪಣಿ ಉಡಾವಣೆ ಖಂಡಿಸಿರುವ ಅಮೆರಿಕ, ಈ ಉಡಾವಣೆಯು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳನ್ನು ಉಲ್ಲಂಘಿಸುತ್ತದೆ. ಉತ್ತರ ಕೊರಿಯಾದ ನೆರೆಹೊರೆ ರಾಷ್ಟ್ರಗಳಿಗೆ ಮತ್ತು ಅಂತಾರಾಷ್ಟ್ರೀಯ ಸಮುದಾಯಕ್ಕೆ ಅಪಾಯವನ್ನುಂಟು ಮಾಡುತ್ತದೆ. ನಾವು DPRKಗೆ ರಾಜತಾಂತ್ರಿಕ ವಿಧಾನಕ್ಕೆ ಬದ್ಧರಾಗಿರುತ್ತೇವೆ ಎಂದು ಅಮೆರಿಕ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಉತ್ತರ ಕೊರಿಯಾದ ಈ ನಡೆ ನಮಗೆ ಅಥವಾ ನಮ್ಮ ಮಿತ್ರ ರಾಷ್ಟ್ರಗಳಿಗೆ ಬೆದರಿಕೆ ಉಂಟು ಮಾಡುವುದಿಲ್ಲ. ಆದರೆ, ಉತ್ತರ ಕೊರಿಯಾದ ಅಕ್ರಮ ಶಸ್ತ್ರಾಸ್ತ್ರ ಕಾರ್ಯಕ್ರಮ ಅಸ್ಥಿರಗೊಳಿಸುವ ಪರಿಣಾಮ ಎತ್ತಿ ತೋರಿಸುತ್ತದೆ. ದಕ್ಷಿಣ ಕೊರಿಯಾ ಮತ್ತು ಜಪಾನ್ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದೆ
ಜಪಾನ್ ಪ್ರಧಾನಿ ಯೋಶಿಹಿದೆ ಸುಗಾ, ಉತ್ತರ ಕೊರಿಯಾ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹಾರಿಸಿದ್ದು, ತನ್ನ ಕಣ್ಗಾವಲು ಹೆಚ್ಚಿಸಿದೆ ಎಂದು ಹೇಳಿದರು. ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆಯು ಉತ್ತರ ಕೊರಿಯಾದ ಬ್ಯಾಲಿಸ್ಟಿಕ್ ಚಟುವಟಿಕೆಗಳ ಮೇಲೆ ಅಮೆರಿಕ ವಿಧಿಸಿರುವ ಸೆಕ್ಯುರಿಟಿ ಕೌನ್ಸಿಲ್ ನಿಷೇಧವನ್ನು ಉಲ್ಲಂಘಿಸುತ್ತದೆ.