ಕಾಬೂಲ್(ಅಫ್ಘಾನಿಸ್ತಾನ) :ಅನೇಕ ದಿನಗಳ ಸರ್ಕಸ್ ನಂತರ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸಂಘಟನೆ ಹೊಸದಾಗಿ ಸರ್ಕಾರ ರಚನೆ ಮಾಡಿದೆ. ತಾಲಿಬಾನ್ ನಾಯಕತ್ವ ಮಂಡಳಿಯ ಮುಖ್ಯಸ್ಥ ಮುಲ್ಲಾ ಮೊಹಮ್ಮದ್ ಹಸನ್ ಅವರನ್ನ ಪ್ರಧಾನಿಯನ್ನಾಗಿ ನೇಮಕ ಮಾಡಲಾಗಿದೆ. ಉಳಿದಂತೆ ಅನೇಕ ಉಗ್ರ ನಾಯಕರಿಗೆ ವಿವಿಧ ಸಚಿವ ಸ್ಥಾನ ನೀಡಲಾಗಿದೆ.
ಶಿಕ್ಷಣ ಸಚಿವರಾಗಿ ಶೇಖ್ ಮೊಲ್ವಿ ನೂರುಲ್ಲಾ ಮುನೀರ್ ಆಯ್ಕೆಯಾಗಿದ್ದು, ಇದರ ಬೆನ್ನಲ್ಲೇ ವಿವಾದಿತ ಹೇಳಿಕೆವೊಂದನ್ನ ಅವರು ನೀಡಿದ್ದಾರೆ. 'ಪಿಹೆಚ್ಡಿ, ಸ್ನಾತಕೋತ್ತರ ಪದವಿಗಳಿಗೆ ಯಾವುದೇ ರೀತಿಯ ಬೆಲೆ(ಮೌಲ್ಯ) ಇಲ್ಲ, ಅಫ್ಘಾನಿಸ್ತಾನದಲ್ಲಿ ಅಧಿಕಾರದಲ್ಲಿರುವ ಮುಲ್ಲಾಗಳು ಮತ್ತು ತಾಲಿಬಾನ್ಗಳು ಯಾವುದೇ ಪಿಹೆಚ್ಡಿ, ಎಂಎ ಅಥವಾ ಪ್ರೌಢ ಶಿಕ್ಷಣ ಪಡೆದುಕೊಂಡಿಲ್ಲ. ಆದರೂ ಅವರೂ ಎಲ್ಲರಿಗಿಂತಲೂ ಶ್ರೇಷ್ಠರು' ಎಂದು ಹೇಳಿದ್ದಾರೆ.
ಮುಲ್ಲಾಗಳು, ತಾಲಿಬಾನ್ಗಳು ಯಾವುದೇ ರೀತಿಯ ಶಿಕ್ಷಣ ಪಡೆದುಕೊಳ್ಳುವುದಿಲ್ಲ. ಆದರೂ ಅವರು ಎಲ್ಲರಿಗಿಂತಲೂ ಶ್ರೇಷ್ಠರಾಗಿರುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಪಿಹೆಚ್ಡಿ, ಪದವಿ ಅಥವಾ ಸ್ನಾತಕೋತ್ತರ ಪದವಿಗಳಿಗೆ ಯಾವುದೇ ರೀತಿಯ ಬೆಲೆ ಇಲ್ಲ ಎಂದಿದ್ದಾರೆ.