ಬೀಜಿಂಗ್ :ಕೊರೊನಾ ವೈರಸ್ ಮೊದಲ್ಗೊಂಡ ವೈರಸ್ ಪೀಡಿತ ಚೀನಾದ ವುಹಾನ್ ನಗರದ 13 ಜಿಲ್ಲೆಗಳಲ್ಲಿ ಒಂಬತ್ತು ಜಿಲ್ಲೆಗಳನ್ನು ಕಡಿಮೆ ಅಪಾಯದ ಪ್ರದೇಶಗಳೆಂದು ಚೀನಾ ಘೋಷಿಸಿದೆ.
ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (NHC) ಶನಿವಾರದ ತನ್ನ ದೈನಂದಿನ ವರದಿಯಲ್ಲಿ ವುಹಾನ್ ಪ್ರಾಂತ್ಯದಲ್ಲಿ ನಿನ್ನೆ 30 ಹೊಸ ಪ್ರಕರಣಗಳು ದೃಢವಾಗಿದೆ. ಇದನ್ನು ಹೊರತುಪಡಿಸಿ, 47 ಹೊಸ ಶಂಕಿತರು ಪತ್ತೆಯಾಗಿದ್ದಾರೆ. 244 ವಿದೇಶಿಗರು ಸೇರಿದಂತೆ 1,024 ಶಂಕಿತ ಪ್ರಕರಣಗಳು ಇನ್ನೂ ವೈದ್ಯಕೀಯ ಪರಿಶೀಲನೆಯಲ್ಲಿದೆ. ಇದರ ವರದಿ ಇನ್ನಷ್ಟೇ ಬರಬೇಕಿದೆ ಎಂದು ಎನ್‌ಹೆಚ್‌ಸಿ ತಿಳಿಸಿದೆ.
ಶನಿವಾರ ಒಟ್ಟು ಮೂವರು ಸಾವನ್ನಪ್ಪಿದ್ದು, ಈ ಎಲ್ಲಾ ಪ್ರಕರಣ ಹುಬೈ ಪ್ರಾಂತ್ಯದಲ್ಲಿ ವರದಿಯಾಗಿದೆ. ಚೀನಾದಲ್ಲಿ ಈವರೆಗೆ ಸಾವಿನ್ನಪ್ಪಿದವರ ಸಂಖ್ಯೆ 3,329. ಈವರೆಗೆ ಒಟ್ಟು 81,669 ಪ್ರಕರಣ ದೃಢವಾಗಿದ್ದು, ಇದರಲ್ಲಿ 1,376 ರೋಗಿಗಳು ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. 76,964 ಜನರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.
ಚೀನಾದಲ್ಲಿ ಕೊರೊನಾ ಅಪಾಯ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಉನ್ನತ ಮಟ್ಟದಲ್ಲಿ ದೇಶ ವೈರಸ್‌ನ ಕಂಟ್ರೋಲ್ ಮಾಡುತ್ತಿದೆ. ಆದರೆ, ಜಗತ್ತಿನ ಇತರ ದೇಶಗಳಲ್ಲಿ ದಿನದಿಂದ ದಿನಕ್ಕೆ ಈ ವೈರಸ್‌ನ ಅಪಾಯ ಹೆಚ್ಚಾಗುತ್ತಿದೆ.