ಕರ್ನಾಟಕ

karnataka

ETV Bharat / international

ಪೈಶಾಚಿಕ ದಾಳಿಗೆ ಮುನ್ನ ಸಂದೇಶ: ಭಾರತೀಯರನ್ನು ಶತ್ರುಗಳು ಎಂದ ಉಗ್ರ - ಭಾರತೀಯ ಶತ್ರುಗಳು

ನ್ಯೂಜಿಲ್ಯಾಂಡ್​ನ ಮಸೀದಿಗಳ ಮೇಲೆ ದಾಳಿ ನಡೆಸಿದ ಉಗ್ರ ಭಾರತೀಯರನ್ನು ಶತ್ರುಗಳು ಎಂದು ಮ್ಯಾನಿಫ್ಯಾಸ್ಟೋದಲ್ಲಿ ಕರೆದಿದ್ದಾನೆ

ಭಾರತೀಯರನ್ನು ಶತ್ರುಗಳು ಎಂದು ಕರೆದಿದ್ದ ನ್ಯೂಜಿಲ್ಯಾಂಡ್​ನಲ್ಲಿ ಭೀಕರ ದಾಳಿ ಮಾಡಿದ್ದ ಉಗ್ರ

By

Published : Mar 17, 2019, 1:54 PM IST

ವೆಲ್ಲಿಂಗ್ಟನ್​: ನ್ಯೂಜಿಲ್ಯಾಂಡ್​ನ ಕ್ರಿಸ್ಟ್​ಚರ್ಚ್​ನ ಎರಡು ಮಸೀದಿಗಳ ಮೇಲೆ ಪೈಶಾಚಿಕ ದಾಳಿ ನಡೆಸುವುದಕ್ಕೂ 9 ನಿಮಿಷಗಳಿಗೆ ಮುನ್ನ ಉಗ್ರರಿಂದ ನನಗೆ ಮಾಹಿತಿ ಬಂದಿತ್ತು ಎಂದು ನ್ಯೂಜಿಲ್ಯಾಂಡ್​ ಪ್ರಧಾನಿ ಜಸಿಂದಾ ಅರ್ಡೆರ್ನ್ ಇಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ​​

ಈ ಮ್ಯಾನಿಫ್ಯಾಸ್ಟೋದಲ್ಲಿ ಭಾರತ ಸೇರಿ ವಿವಿಧ ದೇಶಗಳಿಂದ ವಲಸೆ ಬಂದವರನ್ನು ಉಗ್ರ ದಾಳಿಕೋರರು ಎಂದು ಕರೆದಿದ್ದಾನೆ. ಅಲ್ಲದೆ, ಪೂರ್ವದ ಶತ್ರುಗಳು ಎಂದೂ ಟೀಕಿಸಿದ್ದಾನೆ ಎಂದು ತಿಳಿದುಬಂದಿದೆ.

ಆದರೆ, ಮ್ಯಾನಿಫ್ಯಾಸ್ಟೋಕ್ಕೆ ಪ್ರತಿಕ್ರಿಯಿಸಲು ಸಮಯ ತುಂಬಾ ಕಡಿಮೆ ಇತ್ತು. ಅಷ್ಟರಲ್ಲಾಗಲೇ ಉಗ್ರ ಭೀಕರ ದಾಳಿ ನಡೆಸಿದ್ದ. 36 ನಿಮಿಷಗಳಲ್ಲೇ ಆತನನ್ನು ಹಿಡಿಯುವಲ್ಲಿ ನಾವು ಸಫಲರಾದೆವು ಎಂದರು. ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ. ಇದರಲ್ಲಿ ಐವರು ಭಾರತೀಯರೂ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇಂದು ನ್ಯೂಜಿಲ್ಯಾಂಡ್​ನಾದ್ಯಂತ ಇರುವ ಎಲ್ಲ ಮಸೀದಿಗಳನ್ನು ತೆರೆಯಲಾಗಿದೆ. ಎಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತ್​ ಮಾಡಲಾಗಿದೆ. ಮಾರ್ಚ್​ 14ರಂದು ಭೀಕರ ದಾಳಿ ನಡೆದಾಗಿನಿಂದ ಮಸೀದಿಗಳನ್ನು ಬಂದ್​ ಮಾಡಲಾಗಿತ್ತು.

ಅಮಾನವೀಯ ದಾಳಿ ನಡೆಸಿ, 50 ಮಂದಿಯ ಸಾವಿಗೆ ಕಾರಣನಾದ ಉಗ್ರ ಬ್ರೆಂಟಾನ್​ ಹ್ಯಾರಿಸನ್​ ಟರಂಟ್​ ಸದ್ಯ ಜೈಲು ಕಂಬಿ ಎಣಿಸುತ್ತಿದ್ದಾನೆ.

ABOUT THE AUTHOR

...view details