ಕರ್ನಾಟಕ

karnataka

ETV Bharat / international

ಹೆರಿಗೆ ನೋವಲ್ಲೇ ಸೈಕಲ್​​ ತುಳಿದು ಆಸ್ಪತ್ರೆ ತಲುಪಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಸಂಸದೆ!

ಮೂರು ವರ್ಷದ ಹಿಂದೆಯೂ ಕೂಡ ಸೈಕಲ್​​ ತುಳಿದು ಹೆರಿಗೆಗಾಗಿ ಆಸ್ಪತ್ರೆಗೆ ಬಂದಿದ್ದ ನ್ಯೂಜಿಲ್ಯಾಂಡ್​ನ ಸಂಸದೆ ಜೂಲಿ ಅನ್ನೆ ಜೆಂಟರ್, ಇಂದು ಮತ್ತೊಮ್ಮೆ ಹೆರಿಗೆ ನೋವಲ್ಲೇ ಸೈಕಲ್​​ ತುಳಿದು ಆಸ್ಪತ್ರೆಗೆ ದಾಖಲಾಗಿ ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ.

New Zealand MP cycling to hospital in labour
ಹೆರಿಗೆ ನೋವಲ್ಲೇ ಸೈಕಲ್​​ ತುಳಿದು ಆಸ್ಪತ್ರೆ ತಲುಪಿದ ಸಂಸದೆ

By

Published : Nov 28, 2021, 12:29 PM IST

ವೆಲ್ಲಿಂಗ್ಟನ್ (ನ್ಯೂಜಿಲ್ಯಾಂಡ್): ಹೆರಿಗೆ ನೋವಲ್ಲೇ ಆಸ್ಪತ್ರೆವರೆಗೂ ಸೈಕಲ್​​ ತುಳಿದು ಬಂದು ಮಗುವಿಗೆ ಜನ್ಮ ನೀಡಿ ನ್ಯೂಜಿಲ್ಯಾಂಡ್​ನ ಸಂಸದೆಯೊಬ್ಬರು ಮತ್ತೊಮ್ಮೆ ಎಲ್ಲರ ಗಮನ ಸೆಳೆದರು.

ನ್ಯೂಜಿಲ್ಯಾಂಡ್​ನ ಗ್ರೀನ್‌ ಪಕ್ಷದ ಸಂಸದೆ ಜೂಲಿ ಅನ್ನೆ ಜೆಂಟರ್ 2018ರಲ್ಲಿ ಕೂಡ ಆಸ್ಪತ್ರೆಯವರೆಗೂ ಸೈಕಲ್​ನಲ್ಲೇ ಬಂದು ಯಶಸ್ವಿ ಹೆರಿಗೆ ಮಾಡಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮತ್ತೊಮ್ಮೆ (ತಡರಾತ್ರಿ) ಸೈಕ್ಲಿಂಗ್ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎರಡನೇ ಹೆರಿಗೆಯಲ್ಲಿ ಅವರಿಗೆ ಹೆಣ್ಣು ಮಗು ಜನಿಸಿದ್ದು, ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

ಈ ವಿಚಾರವನ್ನು ಜೂಲಿ ಅವರೇ ತಮ್ಮ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. "ಬಿಗ್​ ನ್ಯೂಸ್! ಇಂದು ಮುಂಜಾನೆ 3.04 ಗಂಟೆಗೆ ನಾವು ನಮ್ಮ ಕುಟುಂಬದ ಹೊಸ ಸದಸ್ಯಳನ್ನು ಸ್ವಾಗತಿಸಿದ್ದೇವೆ. ಹೆರಿಗೆ ನೋವಲ್ಲಿ ನಾನು ನಿಜವಾಗಿಯೂ ಸೈಕಲ್​ ಓಡಿಸಲು ಮೊದಲು ಯೋಜಿಸಿರಲಿಲ್ಲ. ಆದರೆ ಅದು ಸಂಭವಿಸಿದೆ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕೆಲಸ ಜಾಸ್ತಿ-ವಿಶ್ರಾಂತಿ ಕಡಿಮೆ.. ವೃತ್ತಿನಿರತ ಮಹಿಳೆಯರಿಗೆ ಹೆರಿಗೆ ರಜೆಯ ಪ್ರಾಮುಖ್ಯತೆ ಗೊತ್ತೇ?

ಇವರ ಈ ಪೋಸ್ಟ್​ಗೆ ಕಮೆಂಟ್​ಗಳ ಸುರಿಮಳೆಯೇ ಬರುತ್ತಿದ್ದು ನೆಟಿಜನ್‌ಗಳು, ಗ್ರೀನ್​ ಪಕ್ಷದವರು ಶುಭ ಹಾರೈಸುತ್ತಿದ್ದಾರೆ. ಕೆಲವರು ಈ ಪೋಸ್ಟ್​ ಅನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

For All Latest Updates

ABOUT THE AUTHOR

...view details