ಕಾಬೂಲ್(ಅಫ್ಘಾನಿಸ್ತಾನ) :ಅಫ್ಘಾನ್ ರಾಜಧಾನಿ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದ ಮರುದಿನವೇ ಸಾವಿರಾರು ಅಫ್ಘನ್ನರು ದೇಶ ತೊರೆದು ಹೋಗಲು ಮತ್ತದೇ ಏರ್‌ಪೋರ್ಟ್‌ನಲ್ಲಿ ನೆರೆದಿದ್ದಾರೆ.
ಇಬ್ಬರು ಆತ್ಮಾಹುತಿ ಬಾಂಬರ್‌ಗಳ ದುಷ್ಕೃತ್ಯದಿಂದ ದಿಗ್ಭ್ರಮೆಗೊಂಡಿದ್ದ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಶುಕ್ರವಾರದಿಂದ ಜನರನ್ನು ತೆರವುಗೊಳಿಸುವ ಕಾರ್ಯ ಮತ್ತೆ ಆರಂಭವಾಗಿದೆ. ಯುಎಸ್ ಸೇನೆಯು ತನ್ನ ಪ್ರಜೆಗಳ ಸ್ಥಳಾಂತರ ಚಟುವಟಿಕೆಗಳನ್ನು ಮತ್ತಷ್ಟು ಚುರುಕುಗೊಳಿಸಿದೆ.
ವಿಮಾನ ನಿಲ್ದಾಣದ ಹೊರಗೆ ಎಂದಿನಂತೆ ಆತಂಕದಲ್ಲಿಯೇ ಜನರು ತಮ್ಮ ಪ್ರಯಾಣಕ್ಕಾಗಿ ಕಾಯುತ್ತಿದ್ದ ದೃಶ್ಯ ಕಂಡು ಬಂದವು. 500 ಮೀಟರ್‌ವರೆಗೂ ಭಾರಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಹತ್ತಾರು ತಾಲಿಬಾನಿ ಉಗ್ರರು ವಿಮಾನ ನಿಲ್ದಾಣದತ್ತ ಬರದಂತೆ ಜನರನ್ನು ತಡೆಯುತ್ತಿದ್ದರು.