ಕರ್ನಾಟಕ

karnataka

ETV Bharat / international

ಸ್ವೈನ್​​​​​ ಫ್ಲೊ ತರಹದ ರೋಗಗಳು ಸಹಜ: ಚೀನಾ ಸಮರ್ಥನೆ

ಜಿ 4 ಎಂದು ಹೆಸರಿಸಲಾದ ಈ ವೈರಸ್ ಎಚ್ 1 ಎನ್ 1 ಸ್ಟ್ರೈನ್ ತಳಿಯದ್ದಾಗಿದ್ದು, 2009ರಲ್ಲಿ ಸಾಂಕ್ರಾಮಿಕಕ್ಕೆ ಕಾರಣವಾಗಿತ್ತು. ಈ ಬಗ್ಗೆ ಸಂಶೋಧನೆ ನಡೆಸಿರುವ ಯುಎಸ್ ವೈಜ್ಞಾನಿಕ ಜರ್ನಲ್ ಪಿಎನ್‌ಎಎಸ್‌ ವರದಿಯೊಂದನ್ನ ಪ್ರಕಟಿಸಿದೆ.

ಚೀನಾ ವಿದೇಶಾಂಗ ಇಲಾಖೆ ವಕ್ತಾರ ಜಾವೋ ಲಿಜಿಯನ್
ಚೀನಾ ವಿದೇಶಾಂಗ ಇಲಾಖೆ ವಕ್ತಾರ ಜಾವೋ ಲಿಜಿಯನ್

By

Published : Jul 2, 2020, 7:54 AM IST

ಬೀಜಿಂಗ್​:ಸ್ವೈನ್​ ಫ್ಲೂ ತರಹದ ಹೊಸ ವೈರಸ್​​ಗಳು ಸಹಜವಾಗಿ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತವೆ ಎಂದು ಅಲ್ಲಿನ ಸಂಶೋಧಕರು ಕಂಡುಕೊಂಡಿದ್ದಾರೆ ಎಂದು ಚೀನಾ ಹೇಳಿದೆ.

ಜಿ 4 ಎಂದು ಹೆಸರಿಸಲಾದ ಈ ವೈರಸ್ ಎಚ್ 1 ಎನ್ 1 ಸ್ಟ್ರೈನ್‌ನಿಂದ ತಳಿಯದ್ದಾಗಿದ್ದು, 2009ರಲ್ಲಿ ಸಾಂಕ್ರಾಮಿಕಕ್ಕೆ ಕಾರಣವಾಗಿತ್ತು. ಈ ಬಗ್ಗೆ ಸಂಶೋಧನೆ ನಡೆಸಿರುವ ಯುಎಸ್ ವೈಜ್ಞಾನಿಕ ಜರ್ನಲ್ ಪಿಎನ್‌ಎಎಸ್‌ ವರದಿಯೊಂದನ್ನ ಪ್ರಕಟಿಸಿದೆ.

ಚೀನಾ ವಿದೇಶಾಂಗ ಇಲಾಖೆ ವಕ್ತಾರ ಜಾವೋ ಲಿಜಿಯನ್

ಈ ಹಿನ್ನೆಲೆಯಲ್ಲಿ ಮಾತನಾಡಿರುವ ಚೀನಾ ವಿದೇಶಾಂಗ ಇಲಾಖೆ ವಕ್ತಾರ ಜಾವೋ ಲಿಜಿಯನ್​​​​​​​, ವೈರಸ್​​​​ ಪ್ರಭಾವ ಕಂಡುಹಿಡಿಯಲು ನಡೆಸಿದ ಅಧ್ಯಯನಕ್ಕೆ ಸಂಗ್ರಹಿಸಿದ ಸ್ಯಾಂಪಲ್​ಗಳು ಸಾಕಾಗುವಷ್ಟಿರಲಿಲ್ಲ ಎಂದು ಹೇಳಿದ್ದಾರೆ.

ಹೊಸ ವೈರಾಣು ಸೃಷ್ಟಿಯಾಗಿರುವ ಬಗ್ಗೆ ಸಂಬಂಧಪಟ್ಟ ಇಲಾಖೆ ಮತ್ತು ತಜ್ಞರು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಸಂಶೋಧನೆ ಮಾಡಲಿದ್ದಾರೆ. ಈ ವೈರಸ್​​ನಿಂದಾಗುವ ಪರಿಣಾಮಗಳ ಬಗ್ಗೆ ನಿಗಾ ಇಡಲಿದ್ದು, ವಾರ್ನಿಂಗ್​ ಸಹ ನೀಡಲಿದ್ದಾರೆ. ಪರಿಸ್ಥಿತಿಯನ್ನ ನಿಯಂತ್ರಿಸಲು ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಚೀನಾ ವಿದೇಶಾಂಗ ಇಲಾಖೆ ಇದೇ ವೇಳೆ ಭರವಸೆ ನೀಡಿದೆ.

ಕೊರೊನಾ ಬಳಿಕ ಚೀನಾದಲ್ಲಿ ಮತ್ತೊಂದು ವೈರಸ್​ ಸ್ಫೋಟಗೊಂಡಿದೆ ಎಂಬ ವರದಿಗಳಿವೆ. ಈ ಹಿನ್ನೆಲೆಯಲ್ಲಿ ಚೀನಾ ವಿದೇಶಾಂಗ ಇಲಾಖೆಯ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ABOUT THE AUTHOR

...view details