ಕರ್ನಾಟಕ

karnataka

ETV Bharat / international

ಪಾಕ್‌ನ ಸಿಂಧ್‌ನಲ್ಲಿ ಹೊಸ ರೂಪಾಂತರ ಕೋವಿಡ್ ತಳಿ ಪತ್ತೆ - ಪಾಕಿಸ್ತಾನದ ಆರೋಗ್ಯ ಇಲಾಖೆ

ಪಾಕಿಸ್ತಾನದ ಆರೋಗ್ಯ ಅಧಿಕಾರಿಗಳು ಸಿಂಧ್ ಪ್ರಾಂತ್ಯದಲ್ಲಿ ಹೊಸ ರೂಪಾಂತರ ಕೊರೊನಾ ವೈರಸ್ ತಳಿಯ ದಾಖಲೆಯನ್ನು ಪ್ರಕಟಿಸಿದ್ದಾರೆ. ಇತ್ತೀಚೆಗೆ ಬ್ರಿಟನ್‌ನಿಂದ ಹಿಂದಿರುಗಿದ ಪ್ರಯಾಣಿಕರನ್ನ ಪರೀಕ್ಷೆಗೆ ಒಳಪಡಿಸಿದ್ದು, ಮೂರು ಮಾದರಿಗಳಲ್ಲಿ ಯುಕೆಯಲ್ಲಿ ಕಂಡುಬಂದಿರುವ ಹೊಸ ರೂಪಾಂತರ ಪತ್ತೆಯಾಗಿದೆ.

Pak's Sindh
ಪಾಕ್‌ನ ಸಿಂಧ್‌ನಲ್ಲಿ ಹೊಸ ರೂಪಾಂತರ ಕೋವಿಡ್ ಪತ್ತೆ

By

Published : Dec 29, 2020, 7:55 PM IST

ಕರಾಚಿ: ಇತ್ತೀಚೆಗೆ ಯುಕೆಯಿಂದ ಹಿಂದಿರುಗಿದ ಪ್ರಯಾಣಿಕರನ್ನ ಪರೀಕ್ಷೆಗೆ ಒಳಪಡಿಸಿದ್ದು, ಅವರಲ್ಲಿ ಮೂರು ಜನರಿಗೆ ಯುಕೆಯಲ್ಲಿರುವ ಹೊಸ ರೂಪಾಂತರಿ ಕೊರೊನಾ​ ವೈರಸ್ ಲಕ್ಷಣಗಳಿರುವುದು ದೃಢವಾಗಿದೆ ಎಂದು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಆರೋಗ್ಯ ಅಧಿಕಾರಿಗಳು ಮಂಗಳವಾರ ಪ್ರಕಟಿಸಿದ್ದಾರೆ.

ಸಿಂಧ್ ಆರೋಗ್ಯ ಇಲಾಖೆಯು ಯುಕೆ ಹಿಂದಿರುಗಿದ 12 ಜನರ ಮಾದರಿಗಳನ್ನು ಜಿನೋಟೈಪಿಂಗ್​ ಪರೀಕ್ಷೆಗೆ ಒಳಪಡಿಸಿತ್ತು. ಅದರಲ್ಲಿ ಆರು ಜನರು ಕೋವಿಡ್ -19 ಸೋಂಕು ಕಂಡು ಬಂದಿದೆ ಎಂದು ವರದಿ ಮಾಡಿದೆ.

ಇನ್ನು ಆರು ಸೋಂಕಿತರಲ್ಲಿ ಮೊದಲ ಹಂತದಲ್ಲಿ ಮೂವರಲ್ಲಿ ಹೊಸ ರೂಪಾಂತರ ಕೋವಿಡ್​ ಲಕ್ಷಣಗಳಿವೆ ಎಂದು ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

ಜಿನೋಟೈಪಿಂಗ್ ಪರೀಕ್ಷೆಯ ಮೂಲಕ ಇದು ಹೊಸ ರೂಪಾಂತರ ಕೋವಿಡ್​ಗೆ ಶೇ 95 ಪ್ರತಿಶತದಷ್ಟು ಹೊಂದಾಣಿಕೆಯಾಗುತ್ತಿದೆ ಎಂದು ಬಹಿರಂಗಪಡಿಸಿದೆ ಹಾಗೂ ಇದು ಶೇಕಡಾ 70 ರಷ್ಟು ಹೆಚ್ಚು ಹರಡುತ್ತದೆ.

ಅಧಿಕಾರಿಗಳು ರೋಗಿಗಳ ಸಂಪರ್ಕ ಪತ್ತೆಹಚ್ಚುವಿಕೆಯನ್ನು ಪ್ರಾರಂಭಿಸಿದ್ದು, ಅವರನ್ನು ಪ್ರತ್ಯೇಕವಾಗಿರಿಸುತ್ತಿದ್ದಾರೆ.

"ಈ ಮಾದರಿಗಳು ಎರಡನೇ ಸುತ್ತಿನ ಜಿನೋಟೈಪಿಂಗ್ ಪರೀಕ್ಷೆ ಒಳಪಡಿಸಲಾಗುವುದು" ಎಂದು ಇಲಾಖೆಯ ವಕ್ತಾರ ಮೀರನ್ ಯೂಸುಫ್ ತಿಳಿಸಿದರು.

ಮಂಗಳವಾರದ ವೇಳೆಗೆ ಪಾಕಿಸ್ತಾನದ ಒಟ್ಟು ಸೋಂಕಿತರ ಸಂಖ್ಯೆ 4,75,085 ಮತ್ತು ಸಾವಿನ ಸಂಖ್ಯೆ 9,992 ಕ್ಕೆ ಏರಿದೆ.

ABOUT THE AUTHOR

...view details