ಕರ್ನಾಟಕ

karnataka

ETV Bharat / international

ಚುನಾವಣೆಗೆ ದಿನಗಣನೆ ಇರುವಾಗಲೇ ನೆತನ್ಯಾಹು ಭ್ರಷ್ಟಾಚಾರದ ವಿಚಾರಣೆ ಆರಂಭ ! - ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು

ಕೆಲ ತಿಂಗಳುಗಳಿಂದ ಇಸ್ರೇಲಿಗಳು ಇವರ ವಿರುದ್ಧ ಪ್ರತಿ ವಾರ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಹಾಗೆಯೇ ಇವರ ಮೇಲೆ ಆರೋಪಗಳಿರುವ ಕಾರಣಕ್ಕೆ ರಾಜೀನಾಮೆ ನೀಡುವಂತೆ ಆಗ್ರಹ ಕೂಡ ಮಾಡುತ್ತಿದ್ದಾರೆ.

Netanyahu's corruption trial resumes weeks before election
ಚುನಾವಣೆಗೆ ದಿನಗಣನೆ ಇರುವಾಗಲೇ ನೆತನ್ಯಾಹು ಭ್ರಷ್ಟಾಚಾರದ ವಿಚಾರಣೆ ಆರಂಭ

By

Published : Feb 8, 2021, 4:32 PM IST

ಜೆರುಸಲೆಮ್: ರಾಷ್ಟ್ರೀಯ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇದ್ದು, ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಔಪಚಾರಿಕವಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಂದು ಜೆರುಸಲೆಮ್ ನ್ಯಾಯಾಲಯದಲ್ಲಿ ಹಾಜರಾದರು.

ಕೆಲ ತಿಂಗಳುಗಳಿಂದ ಇಸ್ರೇಲಿಗಳು ಇವರ ವಿರುದ್ಧ ಪ್ರತಿ ವಾರ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಹಾಗೆಯೇ ಇವರ ಮೇಲೆ ಆರೋಪಗಳಿರುವ ಕಾರಣಕ್ಕೆ ರಾಜೀನಾಮೆ ನೀಡುವಂತೆ ಆಗ್ರಹ ಕೂಡ ಮಾಡುತ್ತಿದ್ದಾರೆ. ಕೊರೊನಾ ವೈರಸ್​ ಬಿಕ್ಕಟ್ಟಿನಲ್ಲಿ ಅವರ ಸರ್ಕಾರದ ಕೆಲಸಗಳು ವೈಫಲ್ಯ ಕಂಡಿವೆ ಎಂದು ಆರೋಪಿಸಿ ಭಾರಿ ಟೀಕೆ ವ್ಯಕ್ತವಾಗುತ್ತಿದೆ. ಇನ್ನು ನ್ಯಾಯಾಲಯದ ಹೊರಗೆ ಜಮಾಯಿಸಿದ ಪ್ರತಿಭಟನಾಕಾರರು ವಿಚಾರಣೆ ಆಲಿಸಿದರು.

ಸಾರ್ವಜನಿಕ ಸಭೆಗಳಿಗೆ ಲಾಕ್ ಡೌನ್ ವಿಧಿಸಿದ್ದರಿಂದಾಗಿ ಕಳೆದ ತಿಂಗಳು ವಿಚಾರಣೆ ಮುಂದೂಡಲಾಗಿತ್ತು. ಇಸ್ರೇಲ್​ನ ಪ್ರಧಾನಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ಇವರು ಭ್ರಷ್ಟಾಚಾರದ ವಿಚಾರಣೆಗೆ ಒಳಪಟ್ಟ ಮೊದಲ ಪ್ರಧಾನ ಮಂತ್ರಿಯಾಗಿದ್ದಾರೆ. ಇನ್ನು ಇಸ್ರೇಲಿ ಕಾನೂನಿನಲ್ಲಿ ಕ್ಯಾಬಿನೆಟ್ ಮಂತ್ರಿಗಳು ಕ್ರಿಮಿನಲ್ ಅಪರಾಧಗಳಿಗೆ ಗುರಿಯಾದಾಗ ರಾಜೀನಾಮೆ ನೀಡಬೇಕು ಎಂಬ ನಿಯಮ ಇದೆ. ಆದರೆ, ದೋಷಾರೋಪಣೆ ಅಡಿ ಪ್ರಧಾನ ಮಂತ್ರಿಯ ಪ್ರಕರಣ ನಿರ್ದಿಷ್ಟವಾಗಿ ಸೂಚಿಸಿಲ್ಲ.

ನೆತನ್ಯಾಹು ತಮ್ಮ ಮೇಲೆ ಇರುವ ಆರೋಪಗಳನ್ನು ನಿರಾಕರಿಸಿದ್ದಾರೆ. ಹಾಗೆ ಅವರ ವಿರುದ್ಧದ ಆರೋಪಗಳನ್ನು ಪಕ್ಷಪಾತ ಕಾನೂನು ಜಾರಿ ಮತ್ತು ಮಾಧ್ಯಮಗಳು ಆಯೋಜಿಸಿರುವ "ಮಾಟಗಾತಿ-ಬೇಟೆ" (witch-hunt) ಎಂದು ಕರೆದಿದ್ದಾರೆ. ಇಷ್ಟಲ್ಲದೆ ಅಧಿಕಾರದಿಂದ ಕೆಳಗಿಳಿಯಲು ನಿರಾಕರಿಸಿದ್ದಾರೆ.

ನೆತನ್ಯಾಹು 2009 ರಿಂದ ಇಸ್ರೇಲ್‌ನ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಮೂರು ಪ್ರಕ್ಷುಬ್ಧ ವಾತಾವರಣವನ್ನು ಯಶಸ್ವಿಯಾಗಿ ಎದುರಿಸಿದ್ದಾರೆ. ಈಗ ಮಾರ್ಚ್ 23 ರಲ್ಲಿ ಸಂಸತ್ ಚುನಾವಣೆ ನಡೆಯಲಿದ್ದು, ಈ ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ.

ವಿಶ್ವದ ಅತ್ಯಂತ ಯಶಸ್ವಿ ವ್ಯಾಕ್ಸಿನೇಷನ್ ಅಭಿಯಾನದ ಮೂಲಕ ದೇಶವನ್ನು ಸಾಂಕ್ರಾಮಿಕ ರೋಗದಿಂದ ಹೊರಹಾಕಿದ ಬಗ್ಗೆ ನೆತನ್ಯಾಹು ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ಇಸ್ರೇಲ್ ತನ್ನ ಜನಸಂಖ್ಯೆಯ ಮೂರನೇ ಒಂದು ಭಾಗಕ್ಕಿಂತಲೂ ಹೆಚ್ಚಿನ ಜನರಿಗೆ ಲಸಿಕೆ ನೀಡಲು ಅವಕಾಶ ಮಾಡಿಕೊಟ್ಟಿದೆ. ಮಾರ್ಚ್ ಅಂತ್ಯದ ವೇಳೆಗೆ ಇಡೀ ವಯಸ್ಕ ಜನಸಂಖ್ಯೆಗೆ ಲಸಿಕೆ ಹಾಕುವ ಭರವಸೆ ನೀಡಲಾಗಿದೆ. ಆದರೆ, ಈ ನಡುವೆ ಅವರ ಸರ್ಕಾರವು ಬಿಕ್ಕಟ್ಟಿಗೆ ಸಿಲುಕಿದೆ. ಹಲವು ಅಂಶಗಳ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ. ದೇಶವು ಮೂರನೇ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದ ಹೊರಹೊಮ್ಮಲು ಪ್ರಾರಂಭಿಸುತ್ತಿರುವಾಗಲೇ ನಿರುದ್ಯೋಗ ಗಗನಕ್ಕೇರಿದೆ.ಹಲವಾರು ಸಮಸ್ಯೆಗಳು ಉಲ್ಭಣಗೊಂಡಿವೆ.

ಕೊರೊನಾ ವೈರಸ್​ ಎದುರಿಸಲು ಕಳೆದ ಮೇನಲ್ಲಿ ರಚಿಸಲಾದ ತುರ್ತು ಸರ್ಕಾರವು ಗಲಾಟೆ ಮಾಡುವಲ್ಲಿಯೇ ಮುಳುಗಿತ್ತು. ಈ ಹಿನ್ನೆಲೆ ದೇಶದ ನಾಯಕರು ಸ್ಥಿರವಾದ ನೀತಿಗಳನ್ನು ಜಾರಿಗೆ ತರಲು ಹೆಣಗಾಡುವಂತಾಯ್ತು. ಮತ್ತು ಸಾಂಕ್ರಾಮಿಕ ರೋಗದೊಂದಿಗೆ ರಾಜಕೀಯ ಬೆರೆಸಿಕೊಂಡು ಒಬ್ಬರಿಗೊಬ್ಬರು ಕಾಲೆಳೆಯುವ ಪ್ರಕ್ರಿಯೆಗೆ ಮುಂದಾದರು. ಇದರಿಂದ ಏಕಾಏಕಿ ಇಸ್ರೇಲ್​ನಲ್ಲಿ ಸುಮಾರು 700,000 ಪ್ರಕರಣಗ ವರದಿ ಆದವು. ಹಾಗೆ 5,121 ಸಾವುಗಳು ಸಂಭವಿಸಿದವು.

ಇದರಲ್ಲಿ ಪ್ರಮುಖ ವಿವಾದಾತ್ಮಕ ಅಂಶ ಎಂದರೆ, ಇಸ್ರೇಲ್‌ನ ಅಲ್ಟ್ರಾ - ಆರ್ಥೊಡಾಕ್ಸ್ ಯಹೂದಿ ಸಮುದಾಯಕ್ಕೆ ಸಂಬಂಧಿಸಿದೆ. ಇವರಲ್ಲಿ ಹಲವರು ಸಾರ್ವಜನಿಕ ಸಭೆಗಳ ಮೇಲೆ ಇದ್ದ ನಿರ್ಬಂಧಗಳನ್ನು ಬಹಿರಂಗವಾಗಿ ಉಲ್ಲಂಘಿಸಿದ್ದಾರೆ. ಆಳುವ ಒಕ್ಕೂಟವನ್ನು ರಚಿಸಲು ನೆತನ್ಯಾಹು ಅವರಿಗೆ ಅಲ್ಟ್ರಾ-ಆರ್ಥೊಡಾಕ್ಸ್ ಸಮುದಾಯ ಅವಶ್ಯವಾಗಿರುವುದರಿಂದ ಉಲ್ಲಂಘನೆಗಳ ಬಗ್ಗೆ ಕಣ್ಣುಮುಚ್ಚಿ ಸರ್ಕಾರ ನೋಡುವಂತಾಯ್ತು ಎಂದು ವಿಮರ್ಶಕರು ಆರೋಪಿಸುತ್ತಾರೆ.

ABOUT THE AUTHOR

...view details