ನವದೆಹಲಿ: ವಿವಾದಿತ ನೂತನ ನಕ್ಷೆ ತಿದ್ದುಪಡಿ ಮಸೂದೆ(ಕೋಟ್ ಆಫ್ ಆರ್ಮ್ಸ್)ಯನ್ನು ನೇಪಾಳದ ಮೇಲ್ಮನೆಯಲ್ಲಿ ಪ್ರಸ್ತಾಪ ಮಾಡಿದ್ದು, ಅವಿರೋಧವಾಗಿ ಪ್ರಸ್ತಾಪದ ಪರ 57 ಸದಸ್ಯರು ಮತ ಚಲಾಯಿಸಿದ್ದಾರೆ. ಪ್ರಸ್ತಾಪದ ವಿರುದ್ಧ ಯಾರೂ ಮತ ಚಲಾಯಿಸಿಲ್ಲ. ಈ ವಿವಾದಿತ ನೇಪಾಳದ ನಕ್ಷೆಯಲ್ಲಿ ಭಾರತದ ಕೆಲ ಪ್ರದೇಶವನ್ನು ಸೇರಿಸಿಕೊಂಡಿರುವುದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.
ವಿವಾದಿತ ನೂತನ ನಕ್ಷೆ ತಿದ್ದುಪಡಿ ಮಸೂದೆಗೆ ಅಂಗೀಕಾರ: ಭಾರತ ಕೆಣಕಿದ ನೇಪಾಳ - ಪ್ರಸ್ತಾಪಕ್ಕೆಬೆಂಬಲ
ನೇಪಾಳದಲ್ಲಿ ವಿವಾದಿತ ನೂತನ ನಕ್ಷೆ ತಿದ್ದುಪಡಿ ಮಸೂದೆ(ಕೋಟ್ ಆಫ್ ಆರ್ಮ್ಸ್)ಯನ್ನು ಮೇಲ್ಮನೆಯಲ್ಲಿ ಪ್ರಸ್ತಾಪ ಮಾಡಿದ್ದು, ಅಲ್ಲಿನ ಸದಸ್ಯರು ಅವಿರೋಧವಾಗಿ ಪ್ರಸ್ತಾಪಕ್ಕೆ ಬೆಂಬಲ ನೀಡಿದ್ದಾರೆ.
ನೇಪಾಳದ ಮೇಲ್ಮನೆಯಲ್ಲಿ ವಿವಾದಿತ ನೂತನ ನಕ್ಷೆ ತಿದ್ದುಪಡಿ ಮಸೂದೆಗೆ ಅವಿರೋಧ ಬೆಂಬಲ
ಕಳೆದೊಂದು ತಿಂಗಳಿನಿಂದ ನೇಪಾಳ ಕೂಡ ಭಾರತದ ಗಡಿ ಕ್ಯಾತೆ ತೆಗೆದಿದ್ದು, ಕೆಲ ದಿನಗಳ ಹಿಂದಷ್ಟೇ ನೂತನ ನಕ್ಷೆ ತಿದ್ದುಪಡಿ ಮಸೂದೆಯನ್ನ ಕೆಳಮನೆಯಲ್ಲಿ ಪ್ರಸ್ತಾಪ ಮಾಡಿತ್ತು. ಪೂರ್ವ ಲಡಾಖ್‌ನಲ್ಲಿ ಚೀನಾ ಘರ್ಷಣೆಗೆ ಇಳಿದಿರೋದು ಒಂದೆಡೆಯಾಗಿದ್ದರೆ ಇತ್ತ ನೇಪಾಳ ಕೂಡ ಗಡಿ ತಕಾರರು ತೆಗೆದು ಭಾರತಕ್ಕೆ ತಲೆನೋವಾಗಿ ಪರಿಣಮಿಸಿದೆ.