ಕಠ್ಮಂಡು :ಪುನರ್ ರಚನೆಗೊಂಡ ನೇಪಾಳ ಸಂಸತ್ನ ಕೆಳ ಮನೆಯಲ್ಲಿ ವಿಶ್ವಾಸಮತಗಳಿಸುವ ಮೂಲಕ ನೂತನ ಪ್ರಧಾನಿ ಶೇರ್ ಬಹದ್ದೂರ್ ದೇವೊಬಾ ಅಚ್ಚರಿ ಮೂಡಿಸಿದರು. ಈ ಮೂಲಕ ದೇಶದಲ್ಲಿ ಕೋವಿಡ್ ನಡುವೆ ನಡೆಯಬೇಕಿದ್ದ ಸಾರ್ವತ್ರಿಕ ಚುನಾವಣೆಯನ್ನು ತಪ್ಪಿಸಿದರು.
ನೇಪಾಳದಲ್ಲಿ ರಾಜಕೀಯ ಅಸ್ಥಿತರತೆ ಉಂಟಾದ ಬಳಿಕ ಸುಪ್ರೀಂ ಕೋರ್ಟ್ನ ಮಧ್ಯಸ್ಥಿಕೆಯಲ್ಲಿ ಸಂವಿಧಾನದ ವಿಧಿ 76 (5) ಅಡಿ ಜುಲೈ 12 ರಂದು ನೂತನ ಪ್ರಧಾನಿಯನ್ನು ನೇಮಕ ಮಾಡಲಾಗಿದೆ.
ಹೊಸ ಅಧ್ಯಕ್ಷರಾಗಿ ಆಯ್ಕೆಯಾದ 75 ವರ್ಷದ ಶೇರ್ ಬಹದ್ದೂರ್ ದೇವೊಬಾ ಅವರಿಗೆ ಸಂಸತ್ನ ಕೆಳ ಮನೆಯಲ್ಲಿ ವಿಶ್ವಾಸ ಮತ ಗೆಲ್ಲುವ ಸವಾಲು ಎದುರಾಗಿತ್ತು. ಆದರೆ, ಸಂಸತ್ನ 275 ಸದಸ್ಯರ ಪೈಕಿ 165 ಮತಗಳನ್ನು ಪಡೆಯುವ ಮೂಲಕ ದೇವೊಬಾ ಸುಲಭವಾಗಿ ತಮ್ಮ ಖುರ್ಚಿ ಭದ್ರಪಡಿಸಿಕೊಂಡಿದ್ದಾರೆ.
ಓದಿ : 950 ತಾಲಿಬಾನ್ ಉಗ್ರರ ಸಾವು, 500 ಮಂದಿಗೆ ಗಾಯ: ಅಫ್ಘಾನ್ ಸೇನೆ ಭರ್ಜರಿ ಕಾರ್ಯಾಚರಣೆ
ವಿಶ್ವಾಸ ಮತ ಗೆಲ್ಲಲು ಡಿಯುಬಾ ಅವರಿಗೆ 136 ಮತಗಳ ಅಗತ್ಯವಿತ್ತು. ಪ್ರಧಾನಿಯಾಗಿ ಆಯ್ಕೆಯಾದವರು ಒಂದು ತಿಂಗಳ ಒಳಗಾಗಿ ವಿಶ್ವಾಸಮತ ಯಾಚನೆ ಮಾಡಬೇಕು.
ಆದರೆ, ಸುಪ್ರೀಂಕೋರ್ಟ್ನ ಮಧ್ಯ ಪ್ರವೇಶದ ಹಿನ್ನೆಲೆ ಪುನರ್ ರಚನೆಗೊಂಡ ಕೆಳಮನೆಯಲ್ಲಿ ಮೊದಲ ದಿನವೇ ವಿಶ್ವಾಸಮತ ಯಾಚನೆ ನಡೆದಿದೆ. ದೇವೊಬಾ ವಿಶ್ವಾಸ ಮತದಲ್ಲಿ ಸೋತಿದ್ದರೆ, ಸಂಸತ್ ವಿಸರ್ಜನೆ ಮಾಡಿ 6 ತಿಂಗಳ ಒಳಗೆ ಚುನಾವಣೆ ನಡೆಯಬೇಕಿತ್ತು. ಕೋವಿಡ್ ಸಂದಿಗ್ದತೆಯ ನಡುವೆ ಸಾರ್ವತ್ರಿಕ ಚುನಾವಣೆ ನಡೆಸುವುದು ಸವಾಲಿನ ಕೆಲಸವಾಗಿತ್ತು.
ವಿಶ್ವಾಸಮತ ಯಾಚನೆಯಲ್ಲಿ ಗೆದ್ದಿರುವ ಶೇರ್ ಬಹದ್ದೂರ್ ದೇವೊಬಾ ಮುಂದಿನ ಒಂದೂವರೆ ವರ್ಷದ ತನಕ ನೇಪಾಳದ ಪ್ರಧಾನ ಮಂತ್ರಿಯಾಗಿ ಇರಲಿದ್ದಾರೆ. ಬಳಿಕ ಹೊಸದಾಗಿ ಚುನಾವಣೆಯ ನಡೆಯಲಿದೆ.
ಸಂಸತ್ನ ಕೆಳಮನೆಯ ವಿಶ್ವಾಸಮತ ಯಾಚನೆಯಲ್ಲಿ ಒಟ್ಟು 249 ಸದಸ್ಯರು ಪಾಲ್ಗೊಂಡಿದ್ದರು. ಈ ಪೈಕಿ 165 ಜನ ದೇವೊಬಾ ಪರ ಮತ ಚಲಾಯಿಸಿದರೆ, 83 ಮಂದಿ ವಿರುದ್ಧ ಮತ ಹಾಕಿದ್ದರು. ಓರ್ವ ಸದಸ್ಯ ತಟಸ್ಥವಾಗಿದ್ದರು.
ದೇವೊಬಾ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.