ಪಿಥೋರಗಢ(ಉತ್ತರಾಖಂಡ್): ನೇಪಾಳದ ಸಂಸತ್‌ನಲ್ಲಿ ಹೊಸ ನಕ್ಷೆಯ ಮಸೂದೆ ಅಂಗೀಕಾರವಾಗುತ್ತಿದ್ದಂತೆ ಭಾರತದ ವ್ಯಾಪ್ತಿಯಲ್ಲಿನ ಲಿಪುಲೇಖ, ಕಲಾಪಾನಿ ಮತ್ತು ಲಿಂಪಿಯಾಡುರಾವನ್ನು ತನ್ನ ನಕ್ಷೆಯಲ್ಲಿ ಸೇರಿಕೊಂಡಿದೆ. ಇದರ ಬೆನ್ನಲ್ಲೇ ಭಾರತ-ನೇಪಾಳ ಗಡಿಯಲ್ಲಿ ತನ್ನ ಸೇನಾ ಚಟುವಟಿಕೆಗಳನ್ನು ಹೆಚ್ಚಿಸಿಕೊಂಡಿದೆ.
ನಿನ್ನೆಯಷ್ಟೇ ನೇಪಾಳ ಸೇನಾ ಮುಖ್ಯಸ್ಥ ಪುರಾಣ್ ಚಂದ್ರಾ ಥಾಪ ಮತ್ತು ನೇಪಾಳ ಆರ್ಮ್ಡ್ ಫೋರ್ಸ್(ಎನ್‌ಎಎಫ್) ಐಜಿ ಶೈಲೇಂದ್ರ ಸ್ವನಾಲ್ ಕಾಲಾಪಾನಿ ಸಮೀಪದ ದರ್ಚುಲಾ ಗಡಿ ಶಿಬಿರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಇತ್ತೀಚೆಗೆ ನಿರ್ಮಿಸಿರುವ ಛಾಂಗ್ರೂ ಪೋಸ್ಟ್‌ಗೂ ಭೇಟಿ ನೀಡಿದ್ದು, ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಬಳಿಕ ಅಲ್ಲಿನ ಸೇನಾ ಮುಖ್ಯಸ್ಥರು ಮೊದಲ ಭೇಟಿ ಇದಾಗಿದೆ. ಛಾಂಗ್ರೂ ಪೋಸ್ಟ್‌ನಲ್ಲಿ ಎನ್ಎಎಫ್ ಸೈನಿಕರನ್ನು ನಿಯೋಜಿಸಲಾಗಿದೆ.
ನೇಪಾಳ ಸೇನಾ ಮುಖ್ಯಸ್ಥರ ಭೇಟಿ ಬಳಿಕ ಗಡಿಯಲ್ಲಿ ಎಚ್ಚರಿಕೆಯಿಂದ ಇರುವಂತೆ ಭಾರತದ ಭದ್ರತಾ ಏಜೆನ್ಸಿಗಳು ಸೂಚಿಸಿವೆ. ಲಿಪುಲೇಖ, ಕಾಲಾಪಾನಿ ಮತ್ತು ಲಿಂಪಿಯಾಡುರಾವನ್ನು ತನ್ನ ನೂತನ ನಕ್ಷೆಯಲ್ಲಿ ಸೇರಿಸಿಕೊಂಡ ಬಳಿಕ ನೇಪಾಳ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಿತ್ತು. ಭಾರತೀಯ ಸೇನೆ ಕೂಡ ನೇಪಾಳದ ಗಡಿಯಲ್ಲಿ ಎಚ್ಚರಿಕೆಯಿಂದಿದ್ದು, ನೇಪಾಳ ಸೇನೆಯ ಮೇಲೆ ಹದ್ದಿನ ಕಣ್ಣಿಟ್ಟಿದೆ.